ತುಮಕೂರು: ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವ ಟನೆ ನಗರದಲ್ಲಿ ಸೋಮವಾರ ನಡೆದಿದೆ. ನಗರದ ಗುಬ್ಬಿ ಗೇಟ್ ವೃತ್ತದಲ್ಲಿ ಹೋಟೆಲ್ ನಡೆಸುತ್ತಿದ್ದ ತಾಲೂಕಿನ ಅರೆಕೆರೆ ಗ್ರಾಮದ ರಾಜೇಶ್ವರಿ (45) ಮೃತೆ. ಸೋಮವಾರ ಬೆಳಗ್ಗೆ ಪತಿ ಜತೆ ಮನೆ ಕಡೆಗೆ ಬೈಕ್ನಲ್ಲಿ ತೆರಳುತ್ತಿದ್ದಾಗ ನಗರದ ಬಾವಿಕಟ್ಟೆ ಕಲ್ಯಾಣಮಂಟಪದ ಬಳಿ ಅಪಘಾತ ಸಂಭವಿಸಿದೆ. ತುಮಕೂರಿನಿಂದ ಕಲುಬುರ್ಗಿ ಕಡೆಗೆ ಹೊರಟಿದ್ದ ಬಸ್ ಬೈಕ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ರಾಜೇಶ್ವರಿ ರಸ್ತೆ ಮೇಲೆ ಬಿದ್ದಿದ್ದು ಅವರ ತಲೆಯ ಮೇಲೆ ಬಸ್ನ ಚಕ್ರ ಹರಿದಿದೆ. ತುಮ ಕೂರು ಸಂಚಾರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.