

ಬಾಳೆಹೊನ್ನೂರು: ಕೊಪ್ಪ ತಾಲೂಕಿನ ಹಿರೇಗದ್ದೆ ಗ್ರಾಪಂ ತುಪ್ಪೂರು ಗ್ರಾಮದಲ್ಲಿ ಶನಿವಾರ ರಾತ್ರಿ ದುಷ್ಕರ್ಮಿಗಳು ಒಂದು ಎಕರೆಗೂ ಅಧಿಕ ಕಾಫಿ ತೋಟವನ್ನು ನಾಶ ಮಾಡಿದ್ದಾರೆ.
ತುಪ್ಪೂರು ಗ್ರಾಮದ ಅಲಗೇಶ್ವರ ಎ.ಸಿ.ಶಂಕರ್ ಎಂಬುವರ ಜಮೀನಿನಲ್ಲಿ ಫಸಲು ಭರಿತವಾಗಿದ್ದ ಒಂದು ಎಕರೆಗೂ ಅಧಿಕ ಪ್ರದೇಶದಲ್ಲಿ ಕಾಫಿ ಗಿಡಗಳನ್ನು ರಾತ್ರೋರಾತ್ರಿ ದುಷ್ಕರ್ಮಿಗಳು ಕಡಿದು ಹಾಕಿದ್ದಾರೆ. ಒಂದು ಎಕರೆಗೂ ಅಧಿಕ ಪ್ರದೇಶದಲ್ಲಿ 750ಕ್ಕೂ ಅಧಿಕ ಕಾಫಿ ಗಿಡಗಳನ್ನು ಕಡಿದಿದ್ದು, ಈ ಕಾಫಿ ಗಿಡಗಳಲ್ಲಿ ಕಾಫಿ ಕಾಯಿಗಳು ಬಂದಿದ್ದು, 10 ವರ್ಷದ ಕಾಫಿ ಗಿಡಗಳಾಗಿವೆ. ಫಸಲು ಬಂದಿದ್ದ ಗಿಡಗಳನ್ನು ಕಳೆದುಕೊಂಡು ಎ.ಸಿ.ಶಂಕರ್ ಅವರ ಕುಟುಂಬಸ್ಥರು ಆತಂಕ್ಕೀಡಾಗಿದ್ದಾರೆ.