ತುಂಬಿ ಹರಿಯುತ್ತಿವೆ ಚೆಕ್​ಡ್ಯಾಂ, ಹಳ್ಳಗಳು

21MDG3
Published on

ಮುಂಡರಗಿ: ಮಂಗಳವಾರ ರಾತ್ರಿ ತಾಲೂಕಿನ ವಿವಿಧೆಡೆ ಸುರಿದ ಮಳೆಯಿಂದ ಚೆಕ್ ಡ್ಯಾಂಗಳು, ಹಳ್ಳಗಳು ತುಂಬಿ ಹರಿಯುತ್ತಿವೆ.

ಭತ್ತ, ಗೋವಿನಜೋಳ ಮೊದಲಾದ ಬೆಳೆಗಳು ನೆಲಕಚ್ಚಿವೆ. ಹಲವೆಡೆ ಮನೆಗಳ ಗೋಡೆಗಳು, ಮೇಲ್ಛಾವಣಿ ಕುಸಿದಿವೆ. ಮುಂಡರಗಿ- ಶಿರೋಳ ಸಂಪರ್ಕ ಕಲ್ಪಿಸುವ ಹಿರೇಹಳ್ಳದ ಕಿರು ಸೇತುವೆ ಮೇಲೆ ನೀರು ಹರಿದ ಪರಿಣಾಮ ಸಂಚಾರ ಅಸ್ತವ್ಯಸ್ತವಾಯಿತು.

ಬೀಡನಾಳ ಗ್ರಾಮದಲ್ಲಿ ಮನೆಗಳ ಗೋಡೆಗಳು, ಮೇಲ್ಛಾವಣಿ ಕುಸಿತವಾಗಿರುವುದನ್ನು ಪರಿಶೀಲಿಸಿದ್ದೇನೆ. ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಗ್ರಾಮ ಲೆಕ್ಕಾಧಿಕಾರಿಗಳಿಗೆ ತಿಳಿಸಲಾಗಿದೆ. ತಾಲೂಕಿನೆಲ್ಲೆಡೆ ಮಳೆಯಿಂದಾದ ಹಾನಿಯ ವರದಿಯನ್ನು ಗ್ರಾಮಲೆಕ್ಕಾಧಿಕಾರಿಗಳಿಂದ ತರಿಸಿಕೊಳ್ಳುತ್ತೇನೆ. ಹಾನಿಯಾದ ಮನೆಗಳಿಗೆ ಹಾಗೂ ಕೃಷಿ, ಕಂದಾಯ ಇಲಾಖೆಯಿಂದ ಜಂಟಿ ಸಮೀಕ್ಷೆ ಮಾಡಿಸಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು.| ಆಶಪ್ಪ ಪೂಜಾರಿ, ಮುಂಡರಗಿ ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net