ತುಂತುರು ಮಳೆಗೆ ಜನ-ಜೀವನ ಅಸ್ತವ್ಯಸ್ತ

Published on

ಹೂವಿನಹಡಗಲಿ: ತಾಲೂಕಿನಾದ್ಯಂತ ಸೋಮವಾರ ಬೆಳಗ್ಗೆಯಿಂದಲೇ ಚಳಿಗಾಳಿ ಬೀಸುವ ಮೂಲಕ ತಂಪಿನ ವಾತಾವರಣ ಸೃಷ್ಟಿಯಾಗಿತ್ತು. ಮಧ್ಯಾಹ್ನ ತಾಲೂಕಿನ ಕೆಲವು ಭಾಗಗಳಲ್ಲಿ ತುಂತುರು ಮಳೆಸುರಿದಿದೆ.

ವಾತಾವರಣ ಬದಲಾವಣೆಯಿಂದ ಜನತೆ ಶೀತ, ಕೆಮ್ಮು ಹಾಗೂ ಅನಾರೋಗ್ಯಕ್ಕೆ ಒಳಗಾಗಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಸಾಮಾನ್ಯವಾಗಿದೆ.

ಶಾಲೆ ಮಕ್ಕಳಲ್ಲಿ ಹೆಚ್ಚಿನ ಪ್ರಮಾಣದ ಶೀತಕಾಣಿಸಿಕೊಂಡು ಮಕ್ಕಳು ಉಸಿರಾಡಲು ತೊಂದರೆ ಪಡುತ್ತಿದ್ದರು. ಮಳೆ ಆರಂಭಿಸುತ್ತಿದಂತೆ ರಸ್ತೆಬದಿ ವ್ಯಾಪಾರಿಗಳು ಮಾರಾಟ ಮಾಡಲು ತಂದಿದ್ದ ವಸ್ತುಗಳ ಮೇಲೆ ತಾಡಪಾಲ್‌ಗಳನ್ನು ಹಾಕಿಕೊಳ್ಳುವ ದೃಶ್ಯಗಳು ಸಾಮಾನ್ಯವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net