ತೀರ್ಪುಗಾರರ ನಿರ್ಣಯಕ್ಕೆ ಬದ್ಧರಾಗಿ

8HHR1
ಹೊಳೆಹೊನ್ನೂರಿನಲ್ಲಿ ಆಯೋಜಿಸಿದ್ದ ಪ್ರೌಢಶಾಲೆಗಳ ತಾಲೂಕು ಮಟ್ಟದ ಕ್ರಿಡಾಕೂಟದಲ್ಲಿ ಬಿಇಒ ಎ.ಕೆ.ನಾಗೇಂದ್ರಪ್ಪ ಕ್ರೀಡಾ ಜ್ಯೋತಿ ಸ್ವೀಕರಿಸಿದರು. ಪಂಚಾಕ್ಷರಿ, ಜಿ.ಆರ್.ಸೀತಾರಾಮ್, ದ್ಯಾಮಪ್ಪ, ಎಚ್.ಸಿ.ರಾಜೇಶ್ ಇತರರಿದ್ದರು.
Published on

ಹೊಳೆಹೊನ್ನೂರು: ಶಾಲಾ ಜೀವನದಲ್ಲಿ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದು ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ಸೂಕ್ತವಾದುದು ಎಂದು ಭದ್ರಾವತಿ ಬಿಇಒ ಎ.ಕೆ.ನಾಗೇಂದ್ರಪ್ಪ ಹೇಳಿದರು.

ಪಟ್ಟಣದ ವಿವೇಕಾನಂದ ಲಯನ್ಸ್ ವಿದ್ಯಾಸಂಸ್ಥೆ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಪ್ರೌಢಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ತಳಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದರೆ ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಲು ಸಾಧ್ಯವಾಗುತ್ತದೆ. ಅದಕ್ಕಾಗಿ ನಿರಂತರ ಪರಿಶ್ರಮ ಪಡಬೇಕು. ಕ್ರೀಡಾಪಟುಗಳು ಕ್ರೀಡಾಸೂರ್ತಿಯಿಂದ ಭಾಗವಹಿಸಿ ತೀರ್ಪುಗಾರರ ನಿರ್ಣಯಕ್ಕೆ ಬದ್ಧರಾಗಿರಬೇಕು ಎಂದರು.

ಶಾಸಕಿ ಶಾರದಾ ಪೂರ‌್ಯಾನಾಯ್ಕ, ಕ್ಷೇತ್ರ ಸಮನ್ವಯ ಅಕಾರಿ ಪಂಚಾಕ್ಷರಿ, ವಿವೇಕಾನಂದ ಲಯನ್ಸ್ ಸಂಸ್ಥೆ ಅಧ್ಯಕ್ಷ ಜಿ.ಆರ್.ಸೀತಾರಾಮ್, ಕಾರ್ಯದರ್ಶಿ ದ್ಯಾಮಪ್ಪ, ಖಜಾಂಚಿ ಎಚ್.ಸಿ.ರಾಜೇಶ್, ಸದಸ್ಯರಾದ ಬಿ.ಎಸ್.ನಾಗರಾಜ್, ಜಿ.ಎನ್.ಸತೀಶ್, ಜಿ.ವೈ.ನಾಗರಾಜ್ ರಾವ್ ಗಡದೆ, ಪ್ರವೀಣ್, ಪ್ರಶಾಂತ್, ಮುಖ್ಯಶಿಕ್ಷಕ ಎಚ್.ಸುರೇಶ್, ದೈಹಿಕ ಶಿಕ್ಷಣ ಶಿಕ್ಷಕ ಶಿವರಾಜ್, ಪ್ರಕಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net