ತೀರ್ಥಹಳ್ಳಿ: ಪುಷ್ಪಾಲಂಕಾರದೊಂದಿಗೆ ಕಂಗೊಳಿಸಿದ ವೆಂಕಟರಮಣನ ಸನ್ನಿಧಾನ

TTH WEB
Published on

ತೀರ್ಥಹಳ್ಳಿ: ಪಟ್ಟಣದ ತಿರುಮಲ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಗಳು ಅತ್ಯಂತ ವ್ಯವಸ್ಥಿತವಾಗಿ ಮತ್ತು ಅದ್ದೂರಿಯಾಗಿ ನೆರವೇರಿದವು. ನಸುಕಿನಿಂದಲೇ ನೆರೆದ ನೂರಾರು ಭಕ್ತರು ದೇವಾಲಯದ ಉತ್ತರ ದಿಕ್ಕಿನ ದ್ವಾರದಿಂದ ಪ್ರವೇಶಿಸಿ ಭೂ ವೈಕುಂಠ ತಿರುಪತಿ ತಿರುಮಲದಿಂದ ಆಗಮಿಸಿ ರಥಬೀದಿಯಲ್ಲಿ ನೆಲೆ ನಿಂತ ಶ್ರೀ ಲಕ್ಷ್ಮೀ ವೆಂಕಟರಣನ ದರ್ಶನವನ್ನು ಪಡೆದರು.

ಗರ್ಭಗುಡಿ ಮಾತ್ರವಲ್ಲದೇ ದೇವಸ್ಥಾನದ ಆವರಣವನ್ನೂ ಪುಷ್ಪಾಲಂಕಾರದೊಂದಿಗೆ ವಿಶೇಷವಾಗಿ ಅಲಂಕರಿಸಲಾಗಿತ್ತು. ಬೆಳಗಿನ ಅವಧಿಯಲ್ಲಿ ಹುಬ್ಬಳ್ಳಿಯ ಹಿಂದುಸ್ತಾನಿ ಗಾಯಕ ಗಂಗಾಧರ ಮಹಂತರ ಭಜನೆ ಹಾಗೂ ಬಂಟ್ವಾಳದ ದೀಕ್ಷಾ ಅವರಿಂದ ಸಂಜೆ ನಡೆದ ಭಜನಾಸಂಧ್ಯಾ ಈ ಧಾರ್ಮಿಕ ಕಾರ್ಯಕ್ಕೆ ವಿಶೇಷ ಕಳೆ ನೀಡಿತ್ತು.

ದಕ್ಷಿಣದ ತಿರುಪತಿ ಎಂದೇ ಖ್ಯಾತಿಯನ್ನು ಪಡೆದಿರುವ ಆರಗ ಸಮೀಪದ ಅರುಣಗಿರಿಯಲ್ಲಿರುವ ವೆಂಕಟರಮಣ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಗಳು ಅತ್ಯಂತ ಅದ್ದೂರಿಯಾಗಿ ಜರುಗಿದವು. ಸಹ್ಯಾದ್ರಿ ಪಾಲಿಟೆಕ್ನಿಕ್‌ನ ನಾಗರಾಜ್ ಕುಟುಂಬ ಅದ್ದೂರಿ ಅಲಂಕಾರ ಮಾಡಿತ್ತು. ಗೃಹ ಸಚಿವ ಆರಗ ಜ್ಞಾನೇಂದ್ರ ದೇವರ ದರ್ಶನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net