ತೀರ್ಥಹಳ್ಳಿ ಎಳ್ಳಮಾವಾಸೆ ಜಾತ್ರೆಗೆ ವಿಧ್ಯುಕ್ತ ಚಾಲನೆ; ಪರಶುರಾಮ ಕೊಂಡದಲ್ಲಿ ಸಾವಿರಾರು ಭಕ್ತರಿಂದ ತೀರ್ಥಸ್ನಾನ

WEB TTH
Published on

ತೀರ್ಥಹಳ್ಳಿ: ಪುರಾಣ ಪ್ರಸಿದ್ಧ ತೀರ್ಥಹಳ್ಳಿಯ ಶ್ರೀ ರಾಮೇಶ್ವರ ದೇವರ ಮೂರು ದಿನಗಳ ಎಳ್ಳಮಾವಾಸೆ ಜಾತ್ರೆ ಶುಕ್ರವಾರದಿಂದ ಆರಂಭವಾಗಿದ್ದು ಇದರ ಅಂಗವಾಗಿ ಮೊದಲ ದಿನ ತುಂಗಾನದಿಯಲ್ಲಿರುವ ಪರಶುರಾಮ ಕೊಂಡದಲ್ಲಿ ಸಾವಿರಾರು ಭಕ್ತರು ತೀರ್ಥ ಸ್ನಾನ ಮಾಡಿದರು.

ಶುಕ್ರವಾರ ನಸುಕಿನಲ್ಲಿ ಶ್ರೀ ರಾಮೇಶ್ವರ ದೇವರ ಪಲ್ಲಕ್ಕಿ ಉತ್ಸವ ನದಿದಡಕ್ಕೆ ಆಗಮಿಸಿ ಕೊಂಡಕ್ಕೆ ಪೂಜೆ ಸಲ್ಲಿಸಿದ ನಂತರ ಭಕ್ತರು ನದಿಯಲ್ಲಿ ಮಿಂದು ಶ್ರೀ ದೇವರ ದರ್ಶನ ಪಡೆದರು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶೀಲಾ ಶೆಟ್ಟಿ ಮತ್ತು ಸದಸ್ಯರು ತೆಪ್ಪೋತ್ಸವ ಸಮಿತಿಯ ಸಂಚಾಲಕ ಸೊಪ್ಪುಗುಡ್ಡೆ ರಾಘವೇಂದ್ರ ಹಾಗೂ ಜಾತ್ರಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಈಚಿನ ಕೆಲವು ಬೆಳವಣಿಗೆ ಹಿನ್ನೆಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿದೆ.

ಶನಿವಾರ ಮಧ್ಯಾಹ್ನ ಶ್ರೀ ರಾಮೇಶ್ವರ ದೇವರ ಮನ್ಮಹಾರಥೋತ್ಸವ ಹಾಗೂ ಭಾನುವಾರ ಸಂಜೆ ತುಂಗಾನದಿಯಲ್ಲಿ ಅದ್ದೂರಿಯ ತೆಪ್ಪೋತ್ಸವ ಜರುಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net