ತೀರ್ಥಹಳ್ಳಿ: ಅರಳಾಪುರ ಗ್ರಾಪಂ ಉಪಾಧ್ಯಕ್ಷೆಯಾಗಿ ಮಲ್ಲಿಕಾ ಅವಿರೋಧ ಆಯ್ಕೆ

TTH WEB
Published on

ತೀರ್ಥಹಳ್ಳಿ: ತಾಲೂಕಿನ ಅರಳಾಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಮಲ್ಲಿಕಾ ರಾಘವೇಂದ್ರ ಅವಿರೋಧವಾಗಿ ಆಯ್ಕೆಯಾದರು. ಅನಿತಾ ಶ್ರೀಧರ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಿಗದಿಯಾಗಿದ್ದು ಬಿಜೆಪಿ ಬೆಂಬಲಿತ ಸದಸ್ಯೆ ಮಲ್ಲಿಕಾ ರಾಘವೇಂದ್ರ ಅವರೊಬ್ಬರೇ ಉಮೇದುವಾರಿಕೆ ಸಲ್ಲಿಸಿದ್ದರಿಂದ ಕಾರ್ಯಪಾಲಕ ಅಭಿಯಂತ ಅಣ್ಣಪ್ಪ ಅವಿರೋಧ ಆಯ್ಕೆ ಘೋಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net