

ಚಿತ್ರದುರ್ಗ: ತಂದೆ, ತಾಯಿ, ಗುರುಗಳ ಋಣ ಪ್ರತಿಯೊಬ್ಬರ ಮೇಲೂ ಇರುತ್ತದೆ ಎಂದು ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು. ಶ್ರೀಗಳು ಕುವೆಂಪು ವಿವಿ ಡಾಕ್ಟರೇಟ್ ಪದವಿಗೆ ಭಾಜನರಾದ ಹಿನ್ನೆಲೆಯ ಲ್ಲಿ ಚಿತ್ರದುರ್ಗ ವೀರಶೈವ ಸಮಾಜವು ನೀಲಕಂಠೇಶ್ವರ ದೇವಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನನ್ನ ಗುರುಗಳನ್ನು ನಾನು ಯಾವತ್ತೂ ಮರೆಯುವುದಿಲ್ಲ. ಓದಲು ಮುರುಘಾಮಠಕ್ಕೆ ಬಂದಿದ್ದ ತನಗೆ ದಾವಣಗೆರೆ ವಿರಕ್ತ ಮಠದ ಜವಾಬ್ದಾರಿ ವಹಿಸಿದರು. ಸಮಾಜದವರು ಗುರುತಿಸಿ ಸನ್ಮಾನಿಸಿರುವುದು ಸಂತಸ ತಂದಿದೆ. ನನಗೆ ಭಕ್ತರೇ ದೇವರೆಂದರು.
ಶ್ರೀಗಳು ಡಾ.ಸಣ್ಣರಾಮಪ್ಪ ಅವರ ಮಾರ್ಗದರ್ಶನದಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರ ಸಾಹಿತ್ಯ ಮತ್ತು ಸಂಸ್ಕೃತಿ ವಿಷಯದ ಮೇಲೆ ಮಹಾಪ್ರಬಂಧ ಮಂಡಿಸಿದ್ದರು.
ವೀರಶೈವ ಸಮಾಜದ ಅಧ್ಯಕ್ಷ ಎಚ್.ಎನ್.ತಿಪ್ಪೇಸ್ವಾಮಿ ಮಾತನಾಡಿದರು. ಎಸ್‌ಜೆಎಂ ಬ್ಯಾಂಕ್ ವ್ಯವಸ್ಥಾಪಕ ಟಿ.ಕೆ.ರಾಜಶೇಖರ್, ನಾಗರಾಜ ಸಂಗಮ್ ಮತ್ತಿತರ ಸಂಘಟನೆಗಳ ಪ್ರಮುಖರು ಶ್ರೀಗಳನ್ನು ಗೌರವಿಸಿದರು.
ಸಮಾಜದ ಕಾರ್ಯದರ್ಶಿ ಪಿ.ವೀರೇಂದ್ರಕುಮಾರ, ಸಹ ಕಾರ್ಯದರ್ಶಿ ಜಿತೇಂದ್ರ ಎನ್.ಹುಲಿಕುಂಟೆ, ನಿರ್ದೇಶಕರಾದ ಎಸ್.ವಿ.ನಾಗರಾಜಪ್ಪ ಸಿದ್ದಾಪುರ,ಡಿ.ಎಸ್.ಮಲ್ಲಿಕಾರ್ಜುನ, ಎಸ್.ಷಡಾಕ್ಷರಯ್ಯ, ಎಸ್.ವಿ. ಕೊಟ್ರೇಶ್, ಡಿವಿಎಸ್ ಪ್ರದೀಪ್, ಕೆ.ಎನ್.ವಿಶ್ವನಾಥಯ್ಯ, ನಿರಂಜನ ದೇವರಮನೆ, ಚಿನ್ಮಯಾನಂದ, ಲತಾ ಉಮೇಶ್ ಇತರರಿದ್ದರು.