ತೀರದ ಗ್ರಾಮಸ್ಥರಿಗೆ ತೊಂದರೆ ಆಗದಿರಲಿ

klb2
ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜ್‌ಗೆ ಜಿ¯್ಲÁಧಿಕಾರಿ ಬಿ.ಫೌಜಿಯಾ ತರನ್ನುಮ್, ವಿಜಯಪುರ ಜಿ¯್ಲÁಧಿಕಾರಿ ಟಿ.ಭೂಬಾಲನ್ ಭೇಟಿ ನೀಡಿ ಪರಿಶೀಲಿಸಿದರು.
Published on

ಅಫಜಲಪುರ: ಮಹಾರಾಷ್ಟçದಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಉಜನಿ ಹಾಗೂ ವೀರ ಜಲಾಶಯದಿಂದ ಭೀಮಾ ನದಿಗೆ 1.50 ಕ್ಯೂಸೆಕ್ ನೀರು ಹರಿ ಬಿಡುತ್ತಿರುವ ಹಿನ್ನೆಲೆಯಲ್ಲಿ ನದಿ ತೀರದ ಗ್ರಾಮಸ್ಥರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅಧಿಕಾರಿಗಳಿಗೆ ಸೂಚಿಸಿದರು.

ಭೀಮಾ ನದಿಯ ಸೊನ್ನ ಬ್ಯಾರೇಜ್‌ಗೆ ಮಂಗಳವಾರ ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರೊಂದಿಗೆ ಜಂಟಿ ಭೇಟಿ ನೀಡಿ, ಪರಿಶೀಲಿಸಿ ಮಾತನಾಡಿ, ಪ್ರಸ್ತುತ ಮಹಾರಾಷ್ಟçದಲ್ಲಿ ಮಳೆ ಕಡಿಮೆ ಆಗಿದೆ ಎಂಬ ಮಾಹಿತಿ ಲಭ್ಯವಿದ್ದು, ನೀರಿನ ಪ್ರಮಾಣ ಕಡಿಮೆ ಆಗಲಿದೆ. ನೀರಿನ ಪ್ರಮಾಣ ನೋಡಿಕೊಂಡು ಎಷ್ಟು ಹಿಡಿದಿಟ್ಟುಕೊಳ್ಳಬೇಕು ಎನ್ನುವುದನ್ನು ನಿರ್ಧರಿಸಲಾಗುವುದು ಎಂದರು.

ನದಿ ದಡದಲ್ಲಿರುವ ಗ್ರಾಮಸ್ಥರು ಭಯಪಡದೆ ಜಾಗೃತಿ ವಹಿಸಬೇಕು. 2020ರಲ್ಲಿ ಪ್ರವಾಹ ಬಂದು ಸಾಕಷ್ಟು ಹಾನಿ ಆಗಿತ್ತು. ಪ್ರಸಕ್ತ ವರ್ಷ ಹಾಗೆ ಆಗುವುದಿಲ್ಲ. ಆದರೆ ವಿನಾಕಾರಣ ನದಿ ತೀರಕ್ಕೆ ಹೋಗಬಾರದು ಎಂದರು.

ವಿಜಯಪುರ ಜಿ¯್ಲÁಧಿಕಾರಿ ಟಿ.ಭೂಬಾಲನ್ ಮಾತನಾಡಿ, ಉಜನಿ ಜಲಾಶಯದಿಂದ 1.3 ಲಕ್ಷ ಕ್ಯೂಸೆಕ್, ವೀರ ಜಲಾಶಯದಿಂದ 40 ಸಾವಿರ ಕ್ಯೂಸೆಕ್ ನೀರು ಭೀಮಾ ನದಿಗೆ ಬರುತ್ತಿದೆ. ವಿಜಯಪುರ ಜಿ¯್ಲೆಗೂ ಪ್ರವಾಹ ಭೀತಿ ಎದುರಾಗಿದೆ. ಸೊನ್ನ ಬ್ಯಾರೇಜ್‌ನಿಂದ ನೀರು ಬಿಡುತ್ತಿದ್ದು, ಪ್ರವಾಹ ಬರುವುದಿಲ್ಲ. ಜನ ಭಯಪಡಬಾರದು ಎಂದರು.

ಜಿಪA ಸಿಇಒ ಭಂವರ್‌ಸಿAಗ್ ಮೀನಾ, ರಾಮಚಂದ್ರ ಗಡದೆ, ಸೂರ್ಯಕಾಂತ ಮಾಲೆ, ಸಮದ್ ಪಟೇಲ್, ಸಂಜೀವಕುಮಾರ ದಾಸರ, ಸುರೇಶ ಚವಾಲ್, ಈರಣ್ಣ ಕೌಲಗಿ, ಎಫ್.ಎಚ್.ಪಠಾಣ್, ಎಸ್.ಎಚ್.ಗಡಗಿಮನಿ, ಗುರುಲಿಂಗಪ್ಪ ಪಾಣೇಗಾಂವ ಇತರರಿದ್ದರು.

ಬ್ಯಾರೇಜ್ ಗೇಟ್ ಪರಿಶೀಲನೆ: ಅಫಜಲಪುರ ತಾಲೂಕಿನ ಸೊನ್ನ ಭೀಮಾ ಬ್ಯಾರೇಜ್‌ನ ಗೇಟ್‌ಗಳು ಯಾವ ರೀತಿ ಕೆಲಸ ಮಾಡುತ್ತವೆ ಎಂದು ಜಿಲ್ಲಾಧಿಕಾರಿಗಳಾದ ಫೌಜಿಯಾ ತರನ್ನುಮ್, ಟಿ.ಭೂಬಾಲನ್ ಪರಿಶೀಲಿಸಿದರು. 29 ಗೇಟ್‌ಗಳಲ್ಲಿ 15 ಗೇಟ್ ಮೂಲಕ ನೀರು ಹೊರ ಹರಿವು ಆಗುತ್ತಿದೆ ಎಂದು ಭೀಮಾ ಏತ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಸಂತೋಷ ಸಜ್ಜನ್ ತಿಳಿಸಿದರು. ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net