

ಲಕ್ಷೆ್ಮೕಶ್ವರ: ಪಟ್ಟಣದ ಹೊರ ವಲಯದಲ್ಲಿರುವ ಅಗಸ್ಱ ತೀರ್ಥ ಪ್ರದೇಶದ ಸಂರಕ್ಷಣೆ ಮತ್ತು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಪುರಸಭೆ ಮುಖ್ಯಾಧಿಕಾರಿ, ಸದಸ್ಯರು ಮತ್ತು ಸಿಬ್ಬಂದಿ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಹಿರಿಯ ಸದಸ್ಯ ಮಹೇಶ ಹೊಗೆಸೊಪ್ಪಿನ ಮಾತನಾಡಿ, ಇದು ಲಕ್ಷೆ್ಮೕಶ್ವರದ ಐತಿಹಾಸಿಕ ಮತ್ತು ಧಾರ್ವಿುಕ ಕ್ಷೇತ್ರವಾಗಿದೆ. ನಿರ್ಲಕ್ಷ್ಯಂದಾಗಿ ಈ ಪ್ರದೇಶವೀಗ ಅನೈತಿಕ ಚಟುವಟಿಕೆ, ತ್ಯಾಜ್ಯ ವಿಲೇವಾರಿಗೆ ಬಳಕೆಯಾಗುತ್ತಿರುವುದು ವಿಷಾದನೀಯ. ಇದರ ಸಂರಕ್ಷಣೆ ಮತ್ತು ಅಭಿವೃದ್ಧಿ ಪುರಸಭೆ ಜವಾಬ್ದಾರಿಯಾಗಿದೆ. ಜತೆಗೆ ಈ ಪ್ರದೇಶವನ್ನು ಉದ್ಯಾನವನ್ನಾಗಿ ಮಾಡಬಹುದಾಗಿದೆ. ಪ್ರತಿವರ್ಷ ಸಂಕ್ರಮಣದಲ್ಲಿ ಇಲ್ಲಿ 2 ದಿನ ಜಾತ್ರೆ ನೆರವೇರುತ್ತದೆ. ಹೀಗಾಗಿ ಕೂಡಲೆ ಕಾರ್ಯಪ್ರವೃತ್ತರಾಗಬೇಕು’ ಎಂದರು.
ಈ ಬಗ್ಗೆ ವಿಜಯವಾಣಿ ದಿನಪತ್ರಿಕೆ ನ. 22ರಂದು ಅವಸಾನದಂಚಿಗೆ ಅಗಸ್ಱ ತೀರ್ಥ ಶೀರ್ಷಿಕೆಯಡಿ ವರದಿ ಮಾಡಿ ಎಚ್ಚರಿಸಿರುವುದು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.
ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಮಾತನಾಡಿ, ಕೂಡಲೆ ಈ ಪ್ರದೇಶವನ್ನು ಹದ್ದುಬಸ್ತ್ ಮಾಡಿಸಿ, ಸ್ವಚ್ಛತೆ ಕಾರ್ಯ ಕೈಗೊಳ್ಳಲಾಗುವುದು. ಪ್ರಾರಂಭಿಕವಾಗಿ ಪುರಸಭೆ ಅನುದಾನದಲ್ಲಿ ಇಲ್ಲಿರುವ 2 ಹೊಂಡಗಳ ಸುತ್ತ ತಂತಿ ಜಾಳಿಗೆ ಹಾಕಿಸಲಾಗುವುದು. ಹೆಚ್ಚಿನ ಅನುದಾನಕ್ಕೆ ಜಿಲ್ಲಾಧಿಕಾರಿಗೆ ಕ್ರಿಯಾಯೋಜನೆ ಕಳುಹಿಸಲಾಗುವುದು ಎಂದರು.