ತಿರುವೈಲು ಜೋಡುಕರೆ ಕಂಬಳ ಆರಂಭ

Published on

ಗುರುಪುರ: ತುಳುನಾಡಿನ ಕಂಬಳ ಒಂದು ವಿಶಿಷ್ಟ ಕ್ರೀಡೆ, ಇದರಲ್ಲಿ ಜಾತಿ-ಮತ ಬೇಧವಿಲ್ಲದೆ ಎಲ್ಲರೂ ಭಾಗವಹಿಸುತ್ತಾರೆ. ಕಂಬಳದಲ್ಲಿ ಉಸೇನ್ ಬೋಲ್ಟ್‌ಗಿಂತಲೂ ವೇಗವಾಗಿ ಓಡುವ ವೇಗಿಗಳಿದ್ದು, ದಾಖಲೆ ನಿರ್ಮಿಸುತ್ತಿದ್ದಾರೆ. ಕಂಬಳ ತುಳುನಾಡಿನಿಂದ ಹೊರಗಡೆಯೂ ಪ್ರಸಿದ್ಧಿಗೆ ಬರುವ ದಿನಗಳು ದೂರವಿಲ್ಲ ಎಂದು ಕರಾವಳಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಗಣೇಶ್ ರಾವ್ ಹೇಳಿದರು.
ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ-ದೇವುಪೂಂಜ ಜೋಡುಕರೆ ಕಂಬಳವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ, ಕಾಂಗ್ರೆಸ್ ಮುಖಂಡ ಮಿಥುನ್ ರೈ, ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಓಂಪ್ರಕಾಶ್ ಶೆಟ್ಟಿ, ಕಾರ್ಪೋರೇಟರ್ ಹೇಮಲತಾ ಆರ್.ಸಾಲ್ಯಾನ್, ಪ್ರವೀನ್‌ಚಂದ್ರ ಆಳ್ವ ತಿರುವೈಲುಗುತ್ತು, ಕೆ.ಅಭಿಷೇಕ್ ಆಳ್ವ ತಿರುವೈಲುಗುತ್ತು, ಸದಾಶಿವ ಭಟ್, ನಾಗರಾಜ ರೈ ತಿಮಿರಿಗುತ್ತು, ಶೇಖರ ಶೆಟ್ಟಿ ಕೊಳಕೆಬೈಲು, ಉಮೇಶ್ ರೈ ಪದವು ಮೇಗಿನಮನೆ, ಯು.ಕರುಣಾಕರ ಶೆಟ್ಟಿ ಜಪ್ಪಿನಮೊಗರು, ಪ್ರತೋಷ್ ರೈ ತಿರುವೈಲು, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಮಾಜಿ ಮೇಯರ್ ಭಾಸ್ಕರ ಮೊಲಿ, ನವನೀತ ಶೆಟ್ಟಿ ಕದ್ರಿ, ಹಿಂದು ಮುಖಂಡ ಜಗದೀಶ ಶೇಣವ, ಮಹಾಬಲ ಮಾರ್ಲ, ಚಂದ್ರಹಾಸ ರೈ, ಚಂದ್ರಹಾಸ ಶೆಟ್ಟಿ ಪೆರ್ಮಂಕಿಗುತ್ತು, ನವೀನ್‌ಚಂದ್ರ ಆಳ್ವ, ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು ಮತ್ತಿತರರು ಪಾಲ್ಗೊಂಡಿದ್ದರು. ಅಶ್ವಿನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಕ್ರೀಡೆ, ಇದರಲ್ಲಿ ಜಾತಿ-ಮತ ಬೇಧವಿಲ್ಲದೆ ಎಲ್ಲರೂ ಭಾಗವಹಿಸುತ್ತಾರೆ. ಕಂಬಳದಲ್ಲಿ ಉಸೇನ್ ಬೋಲ್ಟ್‌ಗಿಂತಲೂ ವೇಗವಾಗಿ ಓಡುವ ವೇಗಿಗಳಿದ್ದು, ದಾಖಲೆ ನಿರ್ಮಿಸುತ್ತಿದ್ದಾರೆ. ಕಂಬಳ ತುಳುನಾಡಿನಿಂದ ಹೊರಗಡೆಯೂ ಪ್ರಸಿದ್ಧಿಗೆ ಬರುವ ದಿನಗಳು ದೂರವಿಲ್ಲ ಎಂದು ಕರಾವಳಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಗಣೇಶ್ ರಾವ್ ಹೇಳಿದರು.
ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ-ದೇವುಪೂಂಜ ಜೋಡುಕರೆ ಕಂಬಳವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ, ಕಾಂಗ್ರೆಸ್ ಮುಖಂಡ ಮಿಥುನ್ ರೈ, ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಓಂಪ್ರಕಾಶ್ ಶೆಟ್ಟಿ, ಕಾರ್ಪೋರೇಟರ್ ಹೇಮಲತಾ ಆರ್.ಸಾಲ್ಯಾನ್, ಪ್ರವೀನ್‌ಚಂದ್ರ ಆಳ್ವ ತಿರುವೈಲುಗುತ್ತು, ಕೆ.ಅಭಿಷೇಕ್ ಆಳ್ವ ತಿರುವೈಲುಗುತ್ತು, ಸದಾಶಿವ ಭಟ್, ನಾಗರಾಜ ರೈ ತಿಮಿರಿಗುತ್ತು, ಶೇಖರ ಶೆಟ್ಟಿ ಕೊಳಕೆಬೈಲು, ಉಮೇಶ್ ರೈ ಪದವು ಮೇಗಿನಮನೆ, ಯು.ಕರುಣಾಕರ ಶೆಟ್ಟಿ ಜಪ್ಪಿನಮೊಗರು, ಪ್ರತೋಷ್ ರೈ ತಿರುವೈಲು, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಮಾಜಿ ಮೇಯರ್ ಭಾಸ್ಕರ ಮೊಲಿ, ನವನೀತ ಶೆಟ್ಟಿ ಕದ್ರಿ, ಹಿಂದು ಮುಖಂಡ ಜಗದೀಶ ಶೇಣವ, ಮಹಾಬಲ ಮಾರ್ಲ, ಚಂದ್ರಹಾಸ ರೈ, ಚಂದ್ರಹಾಸ ಶೆಟ್ಟಿ ಪೆರ್ಮಂಕಿಗುತ್ತು, ನವೀನ್‌ಚಂದ್ರ ಆಳ್ವ, ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು ಮತ್ತಿತರರು ಪಾಲ್ಗೊಂಡಿದ್ದರು. ಅಶ್ವಿನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net