ತಿರಂಗಾ ತಯಾರಿಕೆಗೆ ಮಹಿಳಾ ಸಂಘಗಳ ಸಾಥ್

Capture1
Published on

ಎ.ಪಿ.ಮಠಪತಿ ಕಮಲನಗರ
ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ಹರ್ ಘರ್ ತಿರಂಗಾ ಅಭಿಯಾನಕ್ಕೆ ಮದನೂರ ಗ್ರಾಮದಲ್ಲಿರುವ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಎನ್ಆರ್ಎಲ್ಎಂ) ಅಡಿ ಜೈ ಹನುಮಾನ ಮಹಿಳಾ ಸಂಜೀವಿನಿ ಒಕ್ಕೂಟದ ಸ್ವ ಸಹಾಯ ಸಂಘ ಕೈಜೋಡಿಸಿದೆ.

ಬೇಡಿಕೆಯನ್ನು ಸ್ಥಳೀಯವಾಗಿ ಪೂರೈಸಲು ಗ್ರಾಮೀಣ ಭಾಗದ ಸ್ವಸಹಾಯ ಸಂಘಗಳ ಸದಸ್ಯೆಯರು ಸಿದ್ಧಪಡಿಸಿದ ರಾಷ್ಟ್ರಧ್ವಜ ಖರೀದಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಗ್ರಾಮ ಪಂಚಾಯಿತಿಗಳಿಗೆ ನಿದರ್ೇಶನ ನೀಡಿದೆ. ಅದರಂತೆ ಕಮಲನಗರ ತಾಲೂಕಿನ ತೋರಣಾ, ಮುಧೋಳ್(ಬಿ), ಡೋಣಗಾಂವ(ಎಂ), ಕೊಟಗ್ಯಾಳ, ಮದನೂರ, ಖತಗಾಂವ, ಚಾಂದೋರಿ, ಹಾಲಹಳ್ಳಿ, ಡಿಗ್ಗಿ, ಬಳತ್(ಕೆ), ಸೋನಾಳ, ಹೊಳಸಮುದ್ರ, ಕಮಲನಗರ, ಮುಕರ್ಿ ಗ್ರಾಮಗಳ 129 ಸ್ವಸಹಾಯ ಸಂಘದ 130 ಸದಸ್ಯೆಯರು ರಾಷ್ಟ್ರಧ್ವಜ ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಜಿಪಂ ಸಿಇಒ ಶಿಲ್ಪಾ ಉಸ್ತುವಾರಿಯಲ್ಲಿ ಧ್ವಜ ತಯಾರಿಸಲು ಸ್ವ ಸಹಾಯ ಗುಂಪಿನ ಮಹಿಳೆಯರಿಗೆ ತರಬೇತಿ ನೀಡಿ ಅಗತ್ಯವಿರುವ ಬಟ್ಟೆ, ದಾರವನ್ನು ಎನ್ಆರ್ಎಲ್ಎಂ ಮೇಲ್ವಿಚಾರಕರು ಪೂರೈಕೆ ಮಾಡಿದ್ದಾರೆ. ಈವರೆಗೆ ಸ್ವ ಸಹಾಯ ಸಂಘದ ಮಹಿಳೆಯರು ಕಮಲನಗರದಲ್ಲಿ 841, ತೋರಣಾ 1203, ಮುಧೋಳ್(ಬಿ) 470, ಮುಕರ್ಿ 850, ಡಿಗ್ಗಿ 776, ಸೋನಾಳ 1067, ಮದನೂರ 2173, ಡೋಣಗಾಂವ (ಎಂ) 370, ಕೊಟಗ್ಯಾಳ 420, ಚಾಂದೋರಿ 400, ಬಳತ್(ಕೆ) 152, ದಾಬಕಾದಲ್ಲಿ 754 ಹೀಗೆ 11089 ಧ್ವಜಗಳನ್ನು ಸಿದ್ಧಗೊಂಡಿವೆ ಎಂದು ಎನ್ಆರ್ಎಲ್ಎಂ ವಲಯ ಮೇಲ್ವಿಚಾರಕಿ ಕವಿತಾ ಬಿರಾದಾರ ತಿಳಿಸಿದ್ದಾರೆ.

ಸ್ವ ಸಹಾಯ ಸಂಘದ ಮಹಿಳೆಯರು ಅಚ್ಚುಕಟ್ಟಾಗಿ ಧ್ವಜಗಳನ್ನು ತಯಾರಿಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಸಕರ್ಾರ ಘೋಷಿಸಿರುವ ಹರ್ ಘರ್ ತಿರಂಗಾ ಅಭಿಯಾನಕ್ಕೆ ಅಗತ್ಯವಿರುವ ಧ್ವಜಗಳು ಲಭ್ಯ ಇವೆ. ಸ್ವಸಹಾಯ ಗುಂಪಿನ ಮಹಿಳೆಯರು ಸಿದ್ಧಪಡಿಸಿದ ತಲಾ ಒಂದು ಧ್ವಜವನ್ನು 40 ರೂ.ಗೆ ಖರೀದಿಸುವಂತೆ ಗ್ರಾಪಂಗಳಿಗೆ ಸೂಚಿಸಲಾಗಿದೆ. ಹೊಲಿದ ಒಂದು ಧ್ವಜಕ್ಕೆ 7 ರೂ. ಸ್ವ ಸಹಾಯ ಗುಂಪಿನ ಮಹಿಳೆಗೆ ನೀಡಲು ತಿಳಿಸಲಾಗಿದೆ. ಪ್ರತಿ ಗ್ರಾಪಂ ಕನಿಷ್ಠ 450 ಧ್ವಜ ಖರೀದಿಸುವಂತೆ ಸೂಚಿಸಲಾಗಿದೆ.
| ಹಣಮಂತರಾಯ ಕೌಟಗೆ, ಸಹಾಯಕ ನಿದರ್ೇಶಕ, ತಾಪಂ ಕಮಲನಗರ

ನಮ್ಮ ಗ್ರಾಮದ ಸ್ವಸಹಾಯ ಗುಂಪಿನ ಸದಸ್ಯೆಯರು ಹಗಲೂ-ರಾತ್ರಿ ಎನ್ನದೆ ರಾಷ್ಟ್ರಧ್ವಜ ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಹಣಕ್ಕಾಗಿ ಅಲ್ಲ, ರಾಷ್ಟ್ರಧ್ವಜ ಸಿದ್ಧಪಡಿಸುವ ಅವಕಾಶ ದೊರಕಿದ್ದು ನಮ್ಮ ಭಾಗ್ಯ ಅಂತ ಭಾವಿಸಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ.
| ಜಯಪ್ರಕಾಶ ಬಿರಾದಾರ, ಉಪಾಧ್ಯಕ್ಷ, ಗ್ರಾಪಂ ಮದನೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net