ತಿಮ್ಲಾಪುರ ಗ್ರಾಪಂ ಅಧ್ಯಕ್ಷರಾಗಿ ರಮೇಶ್‌ಗೌಡ

timla
Published on

ಹೊನ್ನಾಳಿ: ತಾಲೂಕಿನ ತಿಮ್ಲಾಪುರ ಗ್ರಾಪಂ ಅಧ್ಯಕ್ಷರಾಗಿ ತರಗನಹಳ್ಳಿ ರಮೇಶ್‌ಗೌಡ ಹಾಗೂ ಉಪಾಧ್ಯಕ್ಷರಾಗಿ ಬೇವಿನಹಳ್ಳಿಯ ಆರ್.ಶಾಂತಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಳೆದ ಎರಡೂವರೆ ವರ್ಷ ಇದ್ದ ಮೀಸಲಾತಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಎರಡನೇ ಹಂತದ ಮೀಸಲಾತಿಗೆ ಸಂಬಂಧಿಸಿದಂತೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ಪುರುಷ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಒಲಿದಿದೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯನ್ನು ಚುನಾವಣಾಧಿಕಾರಿ ಉಮಾ ಘೋಷಿಸಿದರು.
ಈ ಸಂದರ್ಭದಲ್ಲಿ ಸದಸ್ಯರಾದ ಮಂಜು ಜಿ.ಅಶ್ವಿನಿ, ಲಲಿತಾಬಾಯಿ, ಕಿರಣ, ಚಂದ್ರಮ್ಮ, ಗೌರಮ್ಮ, ಮಾಜಿ ಅಧ್ಯಕ್ಷೆ ಅನುಪಮಾ ಅಣ್ಣಪ್ಪ, ಜಯಪ್ಪ, ಮೋಸೋನಾಬಿ, ಮಾಹ್ಮದ್ ಆಲಿ, ಹನುಮಂತಪ್ಪ, ಪ್ರೇಮಾ, ಮಹೇಶ್, ಪಿಡಿಒ ಶಿವಕುಮಾರ್, ಮುಖಂಡರಾದ ಅಣ್ಣಪ್ಪ, ವೀರೇಂದ್ರ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net