ತಿಪ್ಪೇಶ್ವರ ಸ್ವಾಮೀಜಿ ಆಶ್ರಮದಲ್ಲಿ ಕಳ್ಳತನ

8HNL3
Published on

ಹಾನಗಲ್ಲ: ತಾಲೂಕಿನ ಗುಂಡೂರ ಗ್ರಾಮದ ಹೊರವಲಯದಲ್ಲಿರುವ ಬಂಜಾರ ಸಮುದಾಯದ ಗುರುಪೀಠವಾದ ತಿಪ್ಪೇಶ್ವರ ಸ್ವಾಮೀಜಿ ಆಶ್ರಮದಲ್ಲಿ ಸೋಮವಾರ ತಡರಾತ್ರಿ ಕಳ್ಳತನ ನಡೆದಿದೆ.ಜಾತ್ರೆ ನಿಮಿತ್ತ ಸ್ವಾಮೀಜಿ ಹಾಗೂ ಅವರ ಕಾರು ಚಾಲಕ ರಾತ್ರಿ ವೇಳೆ ಗುಂಡೂರಿನ ದೇವಸ್ಥಾನದಲ್ಲಿ ವಾಸ್ತವ್ಯ ಮಾಡಿದ್ದರು. ಇದನ್ನು ಗಮನಿಸಿದ ಕಳ್ಳರು ಸೋಮವಾರ ರಾತ್ರಿ ಆಶ್ರಮದ ಹಿಂಬಾಗಿಲು ಮುರಿದು ಕಾರು ಚಾಲಕನ ಕೊಠಡಿ ಹಾಗೂ ನನ್ನ ಕೊಠಡಿಯ ತಿಜೋರಿಯಲ್ಲಿದ್ದ ಅಂದಾಜು 10 ತೊಲ ಚಿನ್ನಾಭರಣ, 62 ಸಾವಿರ ನಗದು ಕಳ್ಳತನ ಮಾಡಿದ್ದಾರೆ ಎಂದು ತಿಪ್ಪೇಶ್ವರ ಸ್ವಾಮೀಜಿ ತಿಳಿಸಿದ್ದಾರೆ. ಹಾನಗಲ್ಲ ಪಿಎಸ್​ಐ ಶ್ರೀಶೈಲ ಪಟ್ಟಣಶೆಟ್ಟಿ, ಹಾವೇರಿಯ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹಾನಗಲ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net