ತಿಪ್ಪೂರು ಗ್ರಾಪಂ ಸದಸ್ಯನಿಂದಲೇ ಅರಣ್ಯದ ಮರಗಳಿಗೆ ಕೊಡಲಿ

Untitled-7
Published on

ದೊಡ್ಡಬಳ್ಳಾಪುರ: ತಾಲೂಕಿನ ತಿಪ್ಪೂರು ಗ್ರಾಪಂನ ಸುತ್ತಳ್ಳಿ ತಾಂಡದ ಅರಣ್ಯ ಪ್ರದೇಶದಲ್ಲಿ ಗ್ರಾಪಂ ಸದಸ್ಯನೇ ಅಕ್ರಮವಾಗಿ ಮರಗಳನ್ನು ಕಡಿದು ಸಾಗಿಸಿರುವ ಆರೋಪ ಕೇಳಿ ಬಂದಿದೆ.

ಮರಗಳನ್ನು ಕಡಿದು ಸಾಗಿಸುತ್ತಿದ್ದ ವೇಳೆ ಅರಣ್ಯ ರಕ್ಷಕರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಗ್ರಾಪಂ ಸದಸ್ಯ ಸಿದ್ದನಾಯಕ್, ಸಿಬ್ಬಂದಿಗೆ ಧಮಕಿ ಹಾಕಿ ಮರಗಳನ್ನು ಟ್ರ್ಯಾಕ್ಟರ್‌ನಲ್ಲಿ ತೆಗೆದುಕೊಂಡು ಹೋಗಿದ್ದರು. ಇದನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದರು. ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಮಂಗಳವಾರ ಅರಣ್ಯ ವಲಯ ಕಚೇರಿಯಲ್ಲಿ ಪ್ರಕರಣ ದಾಖಲಾಗಿದ್ದು, ಟ್ರ್ಯಾಕ್ಟರ್ ಸಹಿತ ಮರ ವಶಕ್ಕೆ ಪಡೆಯಲಾಗಿದೆ.

ಟ್ರ್ಯಾಕ್ಟರ್ ತಡೆದಿದ್ದ ಸಿಬ್ಬಂದಿಗೆ ಧಮಕಿ ಹಾಕಿದ್ದ ಸಿದ್ದನಾಯಕ್, ನಾನೇನು ಮಾರಾಟ ಮಾಡಲು ಮರಗಳನ್ನು ಕಡಿದಿಲ್ಲ. ಕೃಷಿ ಉದ್ದೇಶಕ್ಕೆ ಕಡಿದಿರುವುದು ಎಂದು ಧಮಕಿ ಹಾಕಿ, ಚಾಲಕನಿಗೆ ಹೇಳಿ ಅಲ್ಲಿಂದ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಿದ್ದ.

ಅರಣ್ಯ ಪ್ರದೇಶದಲ್ಲಿ ಮರಗಳನ್ನು ಕಡಿಯುವುದು ಕಾನೂನು ಬಾಹಿರ. ಅದರಲ್ಲೂ ನಮ್ಮ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್ ಮತ್ತು ಮರಗಳನ್ನು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡಿದ್ದೇವೆ. ಚೇತನ್‌ಕುಮಾರ್ ಅರಣ್ಯ ವಲಯಾಧಿಕಾರಿ ದೊಡ್ಡಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net