ತಿನ್ನುವ ಆಹಾರ ಬಿಸಾಡದಿರಿ

ಕುಶಾಲನಗರ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ತಿನ್ನುವ ಆಹಾರ ಬಿಸಾಡದಿರಿ ಎನ್ನುವ ಫಲಕವನ್ನು ಕುಶಾಲನಗರ ಸಮೀಪದ ಪಾಮ್ ಏರ್ ರೆಸಾರ್ಟ್ ಮಾಲೀಕ ಸಚಿನ್ ಅವರಿಗೆ ನೀಡಲಾಯಿತು. ನೇಹಾ ಜಗದೀಶ್, ಜಾಸ್ಮಿನ್ ಪ್ರಕಾಶ್, ಚಿತ್ರ ರಮೇಶ್ ಇದ್ದರು.
02Kush01
Published on

ಕುಶಾಲನಗರ: ತಿನ್ನುವ ಹಕ್ಕು ನಮಗಿದ್ದರೂ ಬಿಸಾಡುವ ಹಕ್ಕು ನಮಗಿಲ್ಲ. ಆದ್ದರಿಂದ ತಿನ್ನುವ ಆಹಾರವನ್ನು ಯಾರೂ ಬಿಸಾಡಬೇಡಿ ಎಂದು ಕುಶಾಲನಗರ ಇನ್ನರ್‌ವ್ಹೀಲ್ ಕ್ಲಬ್ ಹಿರಿಯ ಸದಸ್ಯೆ ಸೀತಾಲಕ್ಷ್ಮೀ ಕರೆ ನೀಡಿದರು.


ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಕುಶಾಲನಗರದ ಹಲವು ಹೋಟೆಲ್ ಮತ್ತು ರೆಸಾರ್ಟ್‌ಗಳಿಗೆ ಆಹಾರವನ್ನು ಬಿಸಾಡದಿರಿ ಎನ್ನುವ ಫಲಕಗಳನ್ನು ಮಂಗಳವಾರ ನೀಡಿ ಮಾತನಾಡಿದ ಅವರು, ಆಹಾರ ಬೆಳೆಯುವ ರೈತರು ಕಷ್ಟಪಡುವುದನ್ನು ನಾವು ಗೌರವಿಸಬೇಕು. ಸಾರ್ವಜನಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಹಲವು ಹೋಟೆಲ್ಗಳಿಗೆ ಉಚಿತವಾಗಿ ಫಲಕಗಳನ್ನು ನೀಡಿದ್ದೇವೆ. ಸಂಘ ಸಂಸ್ಥೆಗಳು ಈ ವಿಚಾರದಲ್ಲಿ ಎಚ್ಚೆತ್ತುಕೊಂಡು ಅರಿವು ಮೂಡಿಸುವಂತೆ ಆಗಬೇಕು ಎಂದು ತಿಳಿಸಿದರು.

ಅಧ್ಯಕ್ಷೆ ನೇಹಾ ಜಗದೀಶ್, ಕಾರ್ಯದರ್ಶಿ ಜಾಸ್ಮಿನ್‌ಪ್ರಕಾಶ್, ಉಪಾಧ್ಯಕ್ಷೆ ಚಿತ್ರ ರಮೇಶ್, ಖಜಾಂಚಿ ಸುಪ್ರೀತಾ ರವಿ, ನಿಕಟಪೂರ್ವ ಅಧ್ಯಕ್ಷೆ ಆಶ್ವಿನಿ ರೈ, ನಿರ್ದೇಶಕೀಯರಾದ ಶಾಲಿನಿ ನರೇಂದ್ರ, ಮಾಲತಿ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net