ತಿಕೋಟಾದಲ್ಲಿ ರಸ್ತೆಬದಿ ಅಂಗಡಿಗಳ ತೆರವು

Tikota, clearance of roadside shops, Tehsildar, Collector order,
ತಿಕೋಟಾ ಪಟ್ಟಣದಲ್ಲಿ ಬೀದಿಬದಿ ಅಂಗಡಿಗಳನ್ನು ತೆರವು ಮಾಡಲಾಯಿತು.
Published on

ತಿಕೋಟಾ: ಪಟ್ಟಣದ ಬಸವೇಶ್ವರ ವೃತ್ತದಿಂದ ಪೊಲೀಸ್ ಠಾಣೆವರೆಗೆ, ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಹಾಗೂ ಬಸವೇಶ್ವರ ವೃತ್ತದಿಂದ ಬಸ್ ನಿಲ್ದಾಣವರೆಗೆ ರಸ್ತೆಬದಿ ಇರುವ ಅಂಗಡಿಗಳನ್ನು ಜಿಲ್ಲಾಧಿಕಾರಿ ಆದೇಶದ ಮೇರೆಗೆ ತಹಸೀಲ್ದಾರ್ ಪ್ರಶಾಂತ ಚನಗೊಂಡ, ಪಿಎಸ್‌ಐ ದೇವರಾಜ ಉಳ್ಳಾಗಡ್ಡಿ, ಪಪಂ ಮುಖ್ಯಾಧಿಕಾರಿ ಎಚ್.ಎ.ಡಾಲಾಯಿತಿ ನೇತೃತ್ವದಲ್ಲಿ ಭಾನುವಾರ ಬೆಳ್ಳಗೆ 6 ಗಂಟೆವರೆಗೆ ಸಂಜೆವರೆಗೆ ತೆರವು ಮಾಡಲಾಯಿತು.

ತಹಸೀಲ್ದಾರ್ ಪ್ರಶಾಂತ ಚನಗೂಂಡ ಮಾತನಾಡಿ, ಪಟ್ಟಣದಲ್ಲಿ ದಿನದಿಂದ ದಿನಕ್ಕೆ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ರಸ್ತೆ ಕಾಮಗಾರಿ ನಡೆದಿದೆ. ಅಲ್ಲದೆ ಖಾಸಗಿ ವಾಹನಗಳನ್ನು ನಿಲ್ಲಿಸುವುದರಿಂದ ಸಮಸ್ಯೆ ಇನ್ನಷ್ಟು ಗಂಭೀರ ಸ್ವರೂಪ ಪಡೆದಿದೆ. ಪಟ್ಟಣದಲ್ಲಿ ರಸ್ತೆಬದಿಯ 70 ರಿಂದ 80 ಅಂಡಿಗಳು ಭಾನುವಾರ ತೆರವು ಮಾಡಲಾಗಿದೆ ಎಂದರು.

ಅಂಗಡಿಕಾರರು ಮಾತನಾಡಿ, ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ನಮ್ಮ ಅಂಗಡಿಗಳನ್ನು ಪ್ರಾರಂಭ ಮಾಡಲು ಸ್ಥಳ ನೀಡಬೇಕು ಎಂದು ಒತ್ತಾಯಿಸಿದರು. ಅಂಗಡಿಕಾರರು ಶನಿವಾರ ರಾತ್ರಿವರೆಗೆ ತಮ್ಮ ಅಂಗಡಿಗಳನ್ನು ರಕ್ಷಣೆ ಮಾಡಿಕೊಳ್ಳಲು ಉಪವಾಸ ಸತ್ಯಾಗ್ರಹ ಮಾಡಿದರೂ ಯಾವುದೇ ಪ್ರಯೋಜನವಾಗಲ್ಲಿಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net