ತಿಕೋಟಾ ಅಗ್ನಿ ಅವಘಡ; ಅಂಗಡಿಕಾರರಿಗೆ ವಿಜುಗೌಡರಿಂದ ಸಾಂತ್ವನ

IMG-20210403-WA0088
Published on

ವಿಜಯಪುರ: ಆಕಸ್ಮಿಕ ಅಗ್ನಿ ಅವಘಡದಿಂದಾಗಿ ಲಕ್ಷಾಂತರ ರೂ.ಹಾನಿ ಅನುಭವಿಸಿದ ಅಂಗಡಿಕಾರರಿಗೆ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಸಾಂತ್ವನ ಹೇಳಿದ್ದಾರೆ.

ಶನಿವಾರ ಬೆಳಗ್ಗೆ ತಿಕೋಟಾ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿದ್ದ ಮಲ್ಲಪ್ಪ ರಾಮಗಟ್ಟಿ ಅವರ ಪ್ಲಾಸ್ಟಿಕ್ ಪೈಪ್ ಅಂಗಡಿ ಹಾಗೂ ರಾಜು ಎಂಬುವರ ಬೇಕರಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಲಕ್ಷಾಂತರ ರೂ.ಮೌಲ್ಯದ ಪೈಪ್‌ಗಳು ದಹಿಸಿದ್ದವು.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಢಾಯಿಸಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದರು. ಘಟನೆಯಿಂದ ಅಂಗಡಿ ಮಾಲೀಕರು ಕಂಗಾಲಾಗಿದ್ದರು. ಸುದ್ದಿ ತಿಳಿದ ವಿಜುಗೌಡ ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಅಂಗಡಿಕಾರರಿಗೆ ಸಾಂತ್ವನ ಹೇಳಿದ್ದಾರೆ. ಅಲ್ಲದೇ, ಬೆಂಕಿ ಅವಘಡಕ್ಕೆ ಕಾರಣ ಕಂಡು ಹಿಡಿದು ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಸರ್ಕಾರದಿಂದ ಸಹಾಯ ಧನ ಕಲ್ಪಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net