ತಿAಗಳಲ್ಲಿ ಅರ್ಹರಿಗೆ ನಿವೇಶನ ಹಕ್ಕುಪತ್ರ

ydg1
ಗುರುಮಠಕಲ್ ಪುರಸಭೆ ಆವರಣದಲ್ಲಿ ಧರಣಿ ಕುಳಿತ ಫಲಾನುಭವಿಗಳೊಂದಿಗೆ ಮುಖ್ಯಾಧಿಕಾರಿ ಭಾರತಿ ಸಿ.ದಂಡೋತಿ ಸಮಾಲೋಚನೆ ನಡೆಸಿದರು.
Published on

ಗುರುಮಠಕಲ್: ಪುರಸಭೆ ವ್ಯಾಪ್ತಿಯಲ್ಲಿ ಆಶ್ರಯ ಯೋಜನೆ ಫಲಾನುಭವಿಗಳಿಗೆ ಮೂರು ದಶಕ ಹಿಂದೆ ಹಂಚಿಕೆಯಾದ ನಿವೇಶನ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ನಡೆದ ಧರಣಿ ತಿಂಗಳೊಳಗೆ ಕೊಡಿಸುವುದಾಗಿ ಶಾಸಕ ಶರಣಗೌಡ ಕಂದಕೂರ ಭರವಸೆ ಮೇರೆಗೆ ಶುಕ್ರವಾರ ಅಂತ್ಯಗೊAಡಿತು.

ಪುರಸಭೆ ಕಚೇರಿ ಎದುರು ಎರಡು ದಿನಗಳಿಂದ ಮುಖಂಡ ರವೀಂದ್ರರೆಡ್ಡಿ ಪೋತುಲ್ ನೇತೃತ್ವದಲ್ಲಿ ಫಲಾನುಭವಿಗಳು ಧರಣಿ ನಡೆಸುತ್ತಿದ್ದರು. ಮುಖ್ಯಾಧಿಕಾರಿ ಭಾರತಿ ಸಿ.ದಂಡೋತಿ ಧರಣಿನಿರತರ ಬೇಡಿಕೆ ಆಲಿಸಿ ಸರ್ವೇ ನಂ.25ರಲ್ಲಿ ಹಂಚಿಕೆಯಾದ ಅರ್ಹ ಫಲಾನುಭವಿ ಪಟ್ಟಿಯಲ್ಲಿ ಗೊಂದಲವಿದೆ. ಒಂದೊAದು ನಿವೇಶನದ ಹಕ್ಕುಪತ್ರ ಎರಡ್ಮೂರು ಜನರ ಹೆಸರಲ್ಲಿದೆ. ಹೀಗಾಗಿ ಸಂಬAಧಿಸಿದ ಇಲಾಖೆಗಳಿಂದ ಮೂಲ ಫಲಾನುಭವಿಗಳ ಪಟ್ಟಿ ಪಡೆಯಲಾಗುವುದು. ಶಾಸಕರ ಸೂಚನೆಯಂತೆ ತಿಂಗಳೊಳಗೆ ಅರ್ಹರಿಗೆ ಹಕ್ಕುಪತ್ರ ವಿತರಿಸುವುದಾಗಿ ಹೇಳಿದರು.
ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಈ ಸಮಸ್ಯೆ ಪರಿಹರಿಸುವಲ್ಲಿ ಶಾಸಕರು ಕಾಳಜಿ ತೋರಿದ್ದರಿದ ಧರಣಿ ನಿಲ್ಲಿಸುತ್ತಿz್ದೆÃವೆ. ತಿಂಗಳಲ್ಲಿ ನೀಡದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ರವೀಂದ್ರರೆಡ್ಡಿ ಪೋತುಲ್ ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net