ತಾಳಿಕೋಟೆಯಲ್ಲಿ ಹನುಮಾನ ರಥೋತ್ಸವ

Talikote, Rathotsav, Hanuman,
Published on

ತಾಳಿಕೋಟೆ: ಪಟ್ಟಣದ ಆಶ್ರಯ ನಗರ ಬಡಾವಣೆಯಲ್ಲಿರುವ ಮಾರುತೇಶ್ವರ ದೇವಸ್ಥಾನದ 15ನೇ ವರ್ಷದ ಜಯಂತಿ ಹಾಗೂ ರಥೋತ್ಸವ ಏ.23 ರಂದು ವಿಜೃಂಬಣೆಯಿಂದ ಜರುಗಲಿದೆ. ಬೆಳಗ್ಗೆ 6 ಗಂಟೆಗೆ ಮಂದಿರದಲ್ಲಿ ಹೋಮ ಹವನ ಕಾರ್ಯಕ್ರಮ ಜರುಗಲಿವೆ.

ಅಲ್ಲದೆ ಗಂಗಸ್ಥಳ, ಪುರವಂತರ ಸೇವೆಯೊಂದಿಗೆ ಸುಮಂಗಲೆಯರ ಕುಂಭಕಳಸ, ಪಲ್ಲಕ್ಕಿ ಉತ್ಸವದ ಮೆರವಣಿಗೆ ಪಂಚಸೈಯದ ಕೇರೆಗೆ ಹೋಗಿ ಮರಳಿ ಅದೇ ಮಾರ್ಗದ ಮೂಲಕ ದೇವಸ್ಥಾನ ತಲುಪುವುದು. ಮಧ್ಯಾಹ್ನ 3 ಗಂಟೆಗೆ ಧರ್ಮ ಸಭೆ ಜರುಗಲಿದ್ದು ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಸಿದ್ದಲಿಂಗ ದೇವರು ಸಾನ್ನಿಧ್ಯ ವಹಿಸುವರು. ಕೈಲಾಸಪೇಠೆಯ ಬಸವಪ್ರಭು ದೇವರು ಅಧ್ಯಕ್ಷತೆ ವಹಿಸುವರು.

ಆಶ್ರಯ ನಗರದ ವೇ.ಗುರುಶಾಂತಯ್ಯ ಸ್ವಾಮಿಗಳು, ವೇದಮೂರ್ತಿ ಎಸ್.ಎಂ.ಬೇನಾಳಮಠ, ವೇದಮೂರ್ತಿ ಸಂತೋಷಬಟ್ ಜೋಶಿ ಸಾನ್ನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಪತ್ರಕರ್ತ ಜಿ.ಟಿ.ಘೋರ್ಪಡೆ, ಬಸವರಾಜ ಕಟ್ಟಿಮನಿ, ಲಕ್ಷ್ಮೀಕಾಂತ ಬಡಿಗೇರ, ಮಾನಪ್ಪ ಬಡಿಗೇರ, ಪ್ರಭು ಬಡಿಗೇರ, ದೇವರಾಜ ಬಾಗೇವಾಡಿ, ಪ್ರಕಾಶ ಕಟ್ಟಿಮನಿ ಇತರರಿದ್ದರು.

ಸಂಜೆ 5.30 ಗಂಟೆಗೆ ಮಹಾರಥೋತ್ಸವ ಜರುಗಲಿದೆ. ಸಂಜೆ 6.30 ಗಂಟೆಗೆ ಮಾರುತೇಶ್ವರ ತೊಟ್ಟಿಲು ಕಾರ್ಯಕ್ರಮ ದೇವಸ್ಥಾನದಲ್ಲಿ ಜರುಗುವುದು ಎಂದು ಮಾರುತೇಶ್ವರ ಸೇವಾ ಸಂಘ ಪ್ರಕಟನೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net