

ತಾಳಿಕೋಟೆ: ಪಟ್ಟಣದ ಭಾವಸಾರ ಕ್ಷತ್ರೀಯ ಸಮಾಜದ ಕುಲದೇವತೆ ಅಂಬಾಭವಾನಿ ಮಂದಿರದ ವಾರ್ಷಿಕೋತ್ಸವ ಗುರುವಾರ ಭಕ್ತಿಭಾವದೊಂದಿಗೆ ವಿಜೃಂಭಣೆಯಿಂದ ಜರುಗಿತು.
ಬೆಳಗಿನ ಜಾವ ಅಂಬಾಭವಾನಿ ದೇವಿಯ ಮಹಾಮೂರ್ತಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾಮಂಗಳಾರತಿ ಕಾರ್ಯಕ್ರಮ ಜರುಗಿದವು.
ನಂತರ ಮಂದಿರದಲ್ಲಿ ದೆವಸ್ಥಾನದ ಅರ್ಚಕ ಭೀಮಾಶಂಕರ ಜೋಶಿ ಮತ್ತು ಸಂಗಡಿಗರಿಂದ ಹೋಮಹವನ ಕಾರ್ಯಕ್ರಮ ಜರುಗಿದವು.
ನಂತರ ಸುಮಂಗಲೆಯರ ಕುಂಭ- ಕಳಸ, ಪಲ್ಲಕ್ಕಿ ಉತ್ಸವ ಹಾಗೂ ಅಂಬಾಭವಾನಿ ದೇವಿಯ ಭಾವಚಿತ್ರದ ಭವ್ಯ ಮೆರವಣಿಗೆ ಮಂದಿರದಿಂದ ಪ್ರಾರಂಭಗೊಂಡು ಕತ್ರಿ ಬಜಾರ್, ರಾಜವಾಡೆ ಮೂಲಕ ಭಾವನಮಠದ ಪುರಾತನ ಭಾವಿಗೆ ತೆರಳಿ ಗಂಗಸ್ಥಳ ಕಾರ್ಯಕ್ರಮ ನಡೆಯಿತು. ನಾಗರಕಲ್ಲ ಬಡಾವಣೆ, ಶಿವಾಜಿ ಮಹಾರಾಜರ ವೃತ್ತ, ವಿಠ್ಠಲ ಮಂದಿರ ರಸ್ತೆಯ ಮೂಲಕ ಮರಳಿ ದೇವಸ್ಥಾನ ತಲುಪಿತು.
ಭಕ್ತರಿಗೆ ಮಹಾ ಪ್ರಸಾದ ವಿತರಣೆ ಮಾಡಲಾಯಿತು. ಸಾಮೂಹಿಕ ವಿವಾಹ ಕಾರ್ಯವಾಗಿ ಸಮಾಜದ ವತಿಯಿಂದ ಒಂದು ಜೋಡಿ ಮದುವೆಯಾಯಿತು. ವರ ಶ್ರೀಧರ, ವಧು ಪಲ್ಲವಿ ಅವರು ನವಜೀವನಕ್ಕೆ ಕಾಲಿಟ್ಟರು.
ಎಸ್.ಎಸ್.ಎಲ್.ಸಿ., ದ್ವಿತೀಯ ಪಿಯುನಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸಮಾಜದಿಂದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಭಾವಸಾರ ಕ್ಷತ್ರೀಯ ಸಮಾಜದ ಉಪಾಧ್ಯಕ್ಷ ಮಲ್ಲಾರಿ ದರ್ಜಿ, ವಿಜಯ ಮಹೇಂದ್ರಕರ, ಸುಭಾಸ ಮಹೇಂದ್ರಕರ, ಯಲ್ಲಪ್ಪ ದಾಯಪುಲೆ, ಗೋಪಾಲ ಬೇದರಕರ, ಕೋನೇರಪ್ಪ ಹಂಚಾಟೆ, ಯಲ್ಲೋಜಿ ಮಹೇಂದ್ರಕರ, ಚಿನ್ನಪ್ಪ ದಾಯಪುಲೆ, ವಿಜಯ ದರ್ಜಿ, ರಾಜು ಮುಕುಂದ ಹಂಚಾಟೆ, ವೇಣುಗೋಪಾಲ ಹಂಚಾಟೆ, ನಾಗೇಶ ಮಹೇಂದ್ರಕರ, ಕೃಷ್ಣಾಜಿ ಹಂಚಾಟೆ, ರಘುನಾಥ ಬಾಸುತಕರ, ಸುರೇಶ ಪುಲಸ, ಮನಿಷ ಮಹೇಂದ್ರಕರ, ವಿಜಯ ಮಹೇಂದ್ರಕರ, ಅಭಿಷೇಕ ಮಹೇಂದ್ರಕರ, ಚಂದ್ರಕಾಂತ ಗಣಾತೆ, ಶ್ರೀನಿವಾಸ ರಂಗಸುಭೆ, ಯಶ ಮಹೇಂದ್ರಕರ, ಲಕ್ಷ್ಮಣ ಮಹೇಂದ್ರಕರ, ತಿರುಪತಿ ಹಂಚಾಟೆ ಇತರರಿದ್ದರು.