ತಾಳಿಕೋಟೆ ಬಂದ್​ಗೆ ಕರೆ

Talikote bandh call
ತಾಳಿಕೋಟೆ ಬಂದ್​ಗೆ ಸಂಬಂಧಿಸಿ ಪಟ್ಟಣದಲ್ಲಿ ಭಾನುವಾರ ನಡೆದ ಸಭೆಯಲ್ಲಿ ದಲಿತಪರ ಸಂಟನೆ ಮುಖಂಡರು ಪಾಲ್ಗೊಂಡಿದ್ದರು.
Published on

ತಾಳಿಕೋಟೆ: ಕೇಂದ್ರ ಸಚಿವ ಅಮಿತ್​ ಷಾ ರಾಜೀನಾಮೆಗೆ ಆಗ್ರಹಿಸಿ ವಿವಿಧ ದಲಿತಪರ ಸಂಟನೆಗಳ ಒಕ್ಕೂಟದಿಂದ 31 ರಂದು ತಾಳಿಕೋಟೆ ಬಂದ್​ಗೆ ಕರೆ ನೀಡಲಾಗಿದೆ.

ಪಟ್ಟಣದ ಅಂಬೇಡ್ಕರ್​ ಭವನದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ದಲಿತಪರ ಸಂಟನೆಗಳ ಒಕ್ಕೂಟದ ಅಧ್ಯ ಮುತ್ತಪ್ಪಣ್ಣ ಚಮಲಾಪುರ ತಿಳಿಸಿದರು.

ಡಾ. ಅಂಬೇಡ್ಕರ್​ ವಿರುದ್ಧ ಅವಹೇಳನಕಾರಿ ಮಾತನಾಡಿದ ಸಚಿವ ಅಮಿತ್​ ಷಾ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿ ಬಂದ್​ಗೆ ಕರೆ ನೀಡಲಾಗಿದ್ದು, ಪಟ್ಟಣದ ವ್ಯಾಪಾರಸ್ಥರು ಬೆಂಬಲಿಸಬೇಕೆಂದು ಮನವಿ ಮಾಡಿದರು.

ಒಕ್ಕೂಟದ ಉಪಾಧ್ಯ ಬಸವರಾಜ ಕಟ್ಟಿಮನಿ, ಗೌರವ ಅಧ್ಯ ಎಸ್​.ಬಿ ಕಟ್ಟಿಮನಿ, ಡಿಎಸ್​ಎಸ್​ ವಿಭಾಗೀಯ ಸಂಚಾಲಕ ದೇವೇಂದ್ರ ಹಾದಿಮನಿ, ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ನಾಗೇಶ ಕಟ್ಟಿಮನಿ, ಎಚ್​.ಬಿ.ನಡುವಿನಕೇರಿ ಮಾತನಾಡಿದರು.

ರಾಮಪ್ಪ ಕಟ್ಟಿಮನಿ, ಜೈಭೀಮ ಮುತ್ತಗಿ, ಕಾಶಿನಾಥ ಕಾರಗನೂರ, ಶಂಕರ ಪಡಸಾಲಿ, ಸಿದ್ದು ಬಾರಿಗಿಡದ, ರವಿ ಕಟ್ಟಿಮನಿ, ಶಂಕರ ಡೋಣೂರ, ಗುರುಪ್ರಸಾದ ಬಿಜಿ, ಶಾಂತಪ್ಪ ಕೊಡಗಾನೂರ, ಪ್ರವಿಣ ಗೊಟಗುಣಕಿ, ಬಸವರಾಜ ಬೀಸನಾಳ, ಸುಭಾಷ ಕಟ್ಟಿಮನಿ, ಗಿರೀಶ ತಳವಾರ, ಭೀಮರಾವ ರತ್ನಾಕರ, ದೇವಪ್ಪ ಪೂಜಾರಿ, ಶಂಕರ ಕಟ್ಟಿಮನಿ, ಶ್ರೀನಿವಾಸ ಕುಲಕರ್ಣಿ, ಶಂಕರ ಕೂಚಬಾಳ, ರಾಜಕುಮಾರ ತಳವಾರ ಸಭೆೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net