ತಾಳಗುಪ್ಪ - ಖಾನಾಪುರ ರಾಜ್ಯ ಹೆದ್ದಾರಿಯಲ್ಲಿ ಧೂಳಿನ ಗೋಳು

28 Aln 1 - dust
Published on

ಅಳ್ನಾವರ: ಪಟ್ಟಣದಲ್ಲಿ ಕೆಲವು ದಿನಗಳಿಂದ ಉಂಟಾಗುತ್ತಿರುವ ಮಣ್ಣಿನ ಧೂಳಿನಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ತಿರುಗಾಡುವುದು ಒಂದೆಡೆಯಾದರೆ, ಮತ್ತೊಂದೆಡೆ ಕೆಂಧೂಳಿನ ಮಬ್ಬಿಗೆ ರಸ್ತೆ ಕಾಣದ್ದರಿಂದ ವಾಹನಗಳು ಹಗಲಿನಲ್ಲೇ ದೀಪ ಹಚ್ಚಿಕೊಂಡು ಸಂಚರಿಸುವುದು ಅನಿವಾರ್ಯವಾಗಿದೆ.

ಪಟ್ಟಣದ ಮೂಲಕ ಸಾಗಿರುವ ತಾಳಗುಪ್ಪ - ಖಾನಾಪುರ ರಾಜ್ಯ ಹೆದ್ದಾರಿಯ ಎರಡು ಕಿ.ಮೀ. ಅಂತರದಲ್ಲಿ ಪಟ್ಟಣ ಪಂಚಾಯಿತಿ, ತಾಲೂಕು ಕಚೇರಿ, ಪ್ರಮುಖ ಅಂಗಡಿಳು, ಹೋಟೆಲ್​ಗಳು ಈ ರಸ್ತೆಯಲ್ಲೇ ಇರುವುದರಿಂದ ಸಾರ್ವಜನಿಕರು ಧೂಳಿನ ಗೋಳಿಗೆ ಬೇಸತ್ತಿದ್ದಾರೆ.

ಈ ಬಗ್ಗೆ ಸ್ಥಳೀಯ ಪಟ್ಟಣ ಪಂಚಾಯಿತಿ ಹಾಗೂ ಲೋಕೋಪಯೋಗಿ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳು ಪರಸ್ಪರ ಒಬ್ಬರ ಮೇಲೊಬ್ಬರ ಜವಾಬ್ದಾರಿ ಎಂದು ತಳ್ಳಿ ಹಾಕುತ್ತಿದ್ದಾರೆ. ಜನರು ಬೇಸತ್ತು ನಿತ್ಯ ಅನುಭವಿಸುತ್ತಿರುವ ಸಂಕಟಕ್ಕೆ ಜಿಲ್ಲಾಡಳಿತವಾದರೂ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. '

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net