ತಾಲೂಕು ಸರ್ಕಾರಿ ನೌಕರರ ಸಂಘಕ್ಕೆ ನವೀನ್ ಅಧ್ಯಕ್ಷ

mdg emp
ಮೂಡಿಗೆರೆ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಆರ್.ನವೀನ್, ಖಜಾಂಚಿ ಪ್ರವೀಣ್‌ಕುಮಾರ್, ರಾಜ್ಯ ಪರಿಷತ್ ಸದಸ್ಯ ಕೆ.ಎಂ.ದಿನೇಶ್ ಅವರನ್ನು ಅಭಿನಂದಿಸಲಾಯಿತು. ಹೊಸಕೆರೆ ರಮೇಶ್, ಮಹಮ್ಮದ್ ಅಮೀನ್, ಮಲ್ಲಪ್ಪ, ಸಿ.ಬಿ.ಶಂಕರ್, ರವಿ ಇತರರಿದ್ದರು.
Published on

ಮೂಡಿಗೆರೆ: ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾಗಿ ಬಿ.ಆರ್.ನವೀನ್ ಆಯ್ಕೆಯಾದರು. ಶನಿವಾರ ತಾಲೂಕು ಕಚೇರಿಯಲ್ಲಿ ಚುನಾವಣೆ ನಡೆಯಿತು. 34 ನಿರ್ದೇಶಕರ ಪೈಕಿ ನಾಲ್ಕೈದು ಮಂದಿ ಅಧ್ಯಕ್ಷ, ಖಜಾಂಚಿ ಮತ್ತು ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಪೈಪೋಟಿ ನೀಡಿದ್ದರಿಂದ ಕೆಲವು ಆಕಾಂಕ್ಷಿಗಳು, ನಿರ್ದೇಶಕರನ್ನು ಬೆದರಿಸುವ ಮಟ್ಟಕ್ಕೂ ಹೋಗಿದ್ದರು.

ಶಿಕ್ಷಕ ಬಿ.ಆರ್.ನವೀನ್ 17 ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು. ಪ್ರತಿಸ್ಪರ್ಧಿ ಸುಂಕಸಾಲೆ ಪಿಡಿಒ ಪದ್ಮರಾಜ್ 16 ಮತ ಪಡೆದರು. ತಾಲೂಕು ಖಜಾನೆ ಇಲಾಖೆ ಉದ್ಯೋಗಿ ಪ್ರವೀಣ್‌ಕುಮಾರ್ 19 ಮತ ಪಡೆದು ಖಜಾಂಚಿಯಾಗಿ ಆಯ್ಕೆಯಾದರು. ಪ್ರತಿಸ್ಪರ್ಧಿ ಉಪ ವಲಯ ಅರಣ್ಯಾಧಿಕಾರಿ ಕೆ.ಟಿ.ಸುಹಾಸ್ 15 ಮತ ಪಡೆದರು. ತಾಲೂಕು ಆಸ್ಪತ್ರೆ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ ಕೆ.ಎಂ.ದಿನೇಶ್ 18 ಮತ ಪಡೆದು ರಾಜ್ಯ ಪರಿಷತ್ ಸದಸ್ಯರಾಗಿ ಆಯ್ಕೆಯಾದರು. ಪ್ರತಿಸ್ಪರ್ಧಿ ಬಿಸಿಎಂ ಇಲಾಖೆಯ ರಾಜೇಶ್ 16 ಮತ ಪಡೆದರು.

ಅಭಿನಂದನಾ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷ ಬಿ.ಆರ್.ನವೀನ್ ಮಾತನಾಡಿ, ಸರ್ಕಾರಿ ನೌಕರರ ಸಂಘದ ಚುನಾವಣೆ ನಡೆದಾಗ ನೌಕರರ ಮಧ್ಯೆ ವೈಮನಸ್ಸು ಉಂಟಾಗುತ್ತದೆ ಎಂಬ ಭಾವನೆ ಸರಿಯಲ್ಲ. ಎಲ್ಲರೂ ಒಗ್ಗಟ್ಟಿನಿಂದ ಮುಂದುವರಿಯುತ್ತೇವೆ. ನನಗೆ ಸಿಕ್ಕಿದ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ನೌಕರರ ಕ್ಷೇಮಾಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ತಿಳಿಸಿದರು.

ಪಪಂ ಉಪಾಧ್ಯಕ್ಷ ಹೊಸಕೆರೆ ರಮೇಶ್, ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಮೊಹಮ್ಮದ್ ಅಮೀನ್, ಮಲ್ಲಪ್ಪ, ಮಂಜುನಾಥ, ಮುಖಂಡರಾದ ಸಿ.ಬಿ.ಶಂಕರ್, ಕುನ್ನಳ್ಳಿ ರವಿ, ಮೊಹಮ್ಮದ್ ಜುಬೇರ್, ಜಾನಕಿ, ಸಿದ್ದೇಶ್, ಸುರೇಂದ್ರ, ಯಾಕೂಬ್ ಗೋಣಿಗದ್ದೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net