

ಹಾಸನ: ಹಾಸನ ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಹಿಳಾ ಘಟಕದ ಅಧ್ಯಕ್ಷರಾಗಿ ಮಮತಾ ಪಾಟೀಲ್ ಸೇರಿದಂತೆ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಗೊಂಡರು.
ನಗರದ ಶ್ರೀ ಬಸವೇಶ್ವರ ದೇವಾಲಯ ಆವರಣದಲ್ಲಿ ಬುಧವಾರ ನಡೆದ ಹಾಸನ ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಹಿಳಾ ಪದಾಧಿಕಾರಿಗಳನ್ನಾಗಿ ಮಹಾಸಭಾದ ಅಧ್ಯಕ್ಷರಾದ ಕಟ್ಟಾಯ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವಿರೋದವಾಗಿ ಅಯ್ಕೆ ಮಾಡಲಾಯಿತು. ಉಳಿದಂತೆ ಉಪಾಧ್ಯಕ್ಷರಾಗಿ ಅಶಾದೇವಿ, ಶೀಲಾ ವಿಶ್ವನಾಥ್, ಎಂ.ಬಿ. ಗಿರಿಜಾಂಬಿಕಾ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಸ್. ಧನಲಕ್ಷ್ಮೀ, ಸಹಕಾರ್ಯದರ್ಶಿಗಳಾಗಿ ಶೋಭಾ ಚಂದ್ರಶೇಖರ್, ಇಂದಿರಾ, ನಾಗರತ್ನಾ ಯೋಗೀಶ್, ಖಜಾಂಚಿಯಾಗಿ ಶೈಲಾ ಮದನ್, ನಿರ್ದೇಶಕರಾಗಿ ಮ್ಯೆತ್ರಿ ವಿನಯ್, ರತ್ನಾ ಸೋಮಶೇಖರ್, ಶುಭಾ ಲತೇಶ್, ಸರಸ್ವತಿ ಚಂದ್ರಶೇಖರ್, ಬಾಮಿನಿ ಹೇಮಂತ್, ವೀಣಾ ದೇವರಾಜ್, ಶ್ವೇತಾ ನಂದಕುಮಾರ್, ಅನೂಸೂಯಾಯ, ಸುಶೀಲಾ ಪಾಲನೇತ್ರ, ಕಮಲ ಚಂದ್ರಶೇಖರ್, ಸವಿತಾ, ದಾಕ್ಷಾಯಿಣಿ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಹಾಸಭಾದ ಮಹಿಳಾ ಘಟಕದ ಮಾಜಿ ಅಧ್ಯಕ್ಷರಾದ ಶೋಭಾ ಮಹೇಶ್, ಅನುಸೂಯಾ ಚನ್ನಬಸಯ್ಯ, ತಾಲೂಕು ಸಮಿತಿಯ ಉಪಾಧ್ಯಕ್ಷ ಎಚ್.ಪಿ. ಹೇಮೇಶ್, ಲೀಲಾ ಧರ್ಮಪ್ಪ, ಪ್ರಧಾನ ಕಾರ್ಯದರ್ಶಿ ಎಚ್.ವಿ. ಹೇಮಂತ್, ಸಹಕಾರ್ಯದರ್ಶಿ ಶೆಟ್ಟಿಹಳ್ಳಿ ಧರ್ಮ, ಕೆ.ಎನ್. ಚಾಂದಿನಿ ಭೂಷಣ್, ನಿರ್ದೇಶಕರಾದ ಮಯೂರಿ ಲೋಕೇಶ್, ಕಿರಣ್ ಕುಮಾರ್ ಹೊಸಮನಿ, ಡಿ.ವಿ. ಮದನ್, ಎಚ್.ಕೆ. ದೀಲಿಪ್, ದರ್ಶನ್, ರಾಜಶೇಖರ್ ಮೂರ್ತಿ, ಸಾವಿತ್ರಿ ವಿಜಯಕುಮಾರ್, ಸುಜಾತಾ ರಾಜಶೇಖರ್, ಲತಾ ಸಂಪತ್, ರಾಜ್ಯ ಸಮಿತಿಯ ಸದಸ್ಯರಾದ ಶಿವಕುಮಾರ್, ರಾಜ್ಯ ಮಹಿಳಾ ಸಮಿತಿ ನಿರ್ದೇಶಕರಾದ ನಾಗರತ್ನಾ, ಜಿಲ್ಲಾ ಉಪಾಧಕ್ಷ ಪುನಿತ್ ಪಟೇಲ್, ಗೀತಾ ಪುಟ್ಟಸ್ವಾಮಿ, ಜಿಲ್ಲಾ ನಿರ್ದೇಶಕರಾದ ಶೋಭನ್ ಬಾಬು ಹಾಗೂ ತಾಲೂಕು ಮಹಿಳಾ ಘಟಕದ ಸದಸ್ಯರು ಪಾಲ್ಗೊಂಡಿದ್ದರು.