ತಾಲೂಕು ಮಟ್ಟಕ್ಕೆ ಕಾರ್ಮೆಲ್ ಹಿರಿಯ ಪ್ರಾಥಮಿಕ ಶಾಲೆ

nrp spotrs carmel
ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆಯಾದ ಮೆಣಸೂರಿನ ಕಾರ್ಮೆಲ್ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು. ಮುಖ್ಯಶಿಕ್ಷಕಿ ಟೀನಾ, ಶಿಕ್ಷಕರು ಇದ್ದರು.
Published on

ಎನ್.ಆರ್.ಪುರ: ದಿಂಡಿನಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮೆಣಸೂರಿನ ಕಾರ್ಮೆಲ್ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಾಲೆ ಮುಖ್ಯಶಿಕ್ಷಕಿ ಟೀನಾ ತಿಳಿಸಿದ್ದಾರೆ.

ದೇಶ ಭಕ್ತಿ ಗೀತೆ ಸ್ಪರ್ಧೆಯಲ್ಲಿ 3ನೇ ತರಗತಿ ಪೂರ್ವಿಕ್ (ಪ್ರ), ಕಥೆ ಹೇಳುವ ಸ್ಪರ್ಧೆಯಲ್ಲಿ 3ನೇ ತರಗತಿ ಎಸ್.ಪ್ರಥಮ್ (ಪ್ರ), ಪ್ರಬಂಧ ಸ್ಪರ್ಧೆಯಲ್ಲಿ 7ನೇ ತರಗತಿ ಎಸ್.ಎನ್.ಸ್ನೇಹಾ(ಪ್ರ), ಚಿತ್ರಕತೆ ಸ್ಪರ್ಧೆಯಲ್ಲಿ 6ನೇ ತರಗತಿ ಅಯನಾ (ಪ್ರ), ಆಶುಭಾಷಣ ಸ್ಪರ್ಧೆಯಲ್ಲಿ 7ನೇ ತರಗತಿ ಸೃಷ್ಠಿ (ಪ್ರ) ಸ್ಥಾನ ಪಡೆದಿದ್ದಾರೆ. ಧಾರ್ಮಿಕ ಪಠಣ ಸ್ಪರ್ಧೆಯಲ್ಲಿ 3ನೇ ತರಗತಿ ಪೂರ್ವಿಕ್ (ದ್ವಿ), ಭಕ್ತಿಗೀತೆ ಸ್ಪರ್ಧೆಯಲ್ಲಿ 7ನೇ ತರಗತಿ ಸಮೀಕ್ಷಾ (ತೃ), ಧಾರ್ಮಿಕ ಪಠಣ 7ನೇ ತರಗತಿ ಸ್ಫೂರ್ತಿ(ತೃ), ಇಂಗ್ಲೀಷ್ ಕಂಠ ಪಾಠ 7ನೇ ತರಗತಿ ಮಂಜುನಾಥ್ (ತೃ), ಹಿಂದಿ ಕಂಠಪಾಠ 7ನೇ ತರಗತಿ ಸ್ನೇಹಾ(ತೃ) ಹಾಗೂ ಮಿಮಿಕ್ರಿ ಸ್ಪರ್ಧೆಯಲ್ಲಿ 7ನೇ ತರಗತಿ ಯದು (ತೃ) ಸ್ಥಾನ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net