ಆ.1,ತಾಲೂಕು ದರ್ಶನ ಕೃತಿ ಬಿಡುಗಡೆ

CCC--00000
Published on

ಚಿತ್ರದುರ್ಗ: ವೈದ್ಯ ಡಾ.ಸಂತೋಷ್ ಹೊಳಲ್ಕೆರೆ ಅವರ ಚಿತ್ರದುರ್ಗ ತಾಲೂಕು ದರ್ಶನ ಕೃತಿ ಬಿಡುಗಡೆ ಹಾಗೂ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ಉದ್ಘಾಟನೆ ಸಮಾರಂಭ ನಗರದ ಪತ್ರಕರ್ತರ ಭವನದಲ್ಲಿ ಆ.1ರ ಬೆಳಗ್ಗೆ 11.30ಕ್ಕೆ ಆಯೋಜಿಸಲಾಗಿದೆ. ಹೊಸದುರ್ಗ ಬ್ರಹ್ಮವಿದ್ಯಾನಗರ ಭಗೀರಥ ಪೀಠದ ಡಾ. ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಜನಪದ ಎಸ್.ಬಾಲಾಜಿ ಉದ್ಘಾಟನೆ, ಜಿಲ್ಲಾಧ್ಯಕ್ಷ ಡಾ.ಬಾ.ಮೈಲಾರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಕಸಾಪ ಮಾಜಿ ಜಿಲ್ಲಾಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಚಿತ್ರದುರ್ಗ ತಾಲೂಕು ದರ್ಶನ ಪುಸ್ತಕವನ್ನು ಬಿಡುಗಡೆಗೊಳಿಸುವರು. ಚಿಕ್ಕಮಗಳೂರು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಇತರರು ಪಾಲ್ಗೊಳ್ಳುವರು ಎಂದು ಹುರುಳಿ ಬಸವರಾಜ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net