

ಚನ್ನರಾಯಪಟ್ಟಣ: ತಾಲೂಕಿನ ಕಿರೀಸಾವೆ ಗ್ರಾಮದ ಸೇತುವೆ ಗಡಿ ಆಂಜನೇಯಸ್ವಾಮಿ ದೇಗುಲದಲ್ಲಿ ಸೋಮವಾರ ಸಂಜೆ ಜರುಗಿದ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಸಹಸ್ರಾರು ಭಕ್ತರು ಭಾಗವಹಿಸಿದ್ದರು.
ಮುಂಜಾನೆಯೇ ದೇಗುಲಕ್ಕೆ ಹಸಿರು ಚಪ್ಪರ ಹಾಕಲಾಗಿದ್ದು ವಿದ್ಯುತ್ ದೀಪಾಲಂಕಾರದೊಂದಿಗೆ ಸಿಂಗರಿಸಲಾಗಿತ್ತು. ಮೊದಲಿಗೆ ವಿಘ್ನೇಶ್ವರ, ನವಗ್ರಹ ಪೂಜೆ ಹಾಗೂ ಕದಳಿ ಫಲಹೋಮ ಬಳಿಕ ಶ್ರೀ ಆಂಜನೇಯಸ್ವಾಮಿ ಮೂರ್ತಿಗೆ ಹೂವಿನ ಅಲಂಕಾರ ನಡೆಯಿತು.
ವಿಶೇ? ಪೂಜಾ ಕೈಂಕರ್ಯಗಳು ನೆರವೇರಿದವು. ಕಿರೀಸಾವೆ ಗಡಿಯ ಹಣ್ಣಿನ ವ್ಯಾಪಾರಿಗಳಿಂದ ಹಣ್ಣುಗಳ ಪ್ರಸಾದ ವಿತರಣೆ ಮಾಡಲಾಯಿತು. ನಂತರ ಭಕ್ತರಿಗೆ ಹಲಸಿನಕಾಯಿ, ಅವರೆಕಾಳು ಸಾರು ಮತ್ತು ರಾಗಿ ಮುದ್ದೆ ಊಟವನ್ನು ಬಡಿಸಲಾಯಿತು.
ಚನ್ನರಾಯಟ್ಟಣ ಹಾಗೂ ನಾಗಮಂಗಲ ತಾಲೂಕಿನ ವಿವಿಧ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಚನ್ನರಾಯಪಟ್ಟಣದ ರಾಮು ಗುಡಿಭಟ್ಟರು ಹಾಗೂ ತಂಡದವರು ದೇಗುಲದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಶಾಸಕ ಸಿ.ಎನ್.ಬಾಲಕೃ?್ಣ, ಮಾಜಿ ಎಂಎಲ್ಸಿ ಎಂ.ಎ.ಗೋಪಾಲಸ್ವಾಮಿ, ಕೆಪಿಸಿಸಿ ಸದಸ್ಯೆ ರಾಜೇಶ್ವರಿ ವಿಜಯಕುಮಾರ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಶ್ಯಾಮಲಾ ಉದಯಕುಮಾರ್, ಹಿರೀಸಾವೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹೇಶ್, ಮಾಜಿ ಸದಸ್ಯರಾದ ದೇವರಾಜು, ವೇದಾಮೂರ್ತಿ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.
ಹಿರೀಸಾವೆಯಲ್ಲಿ ಹನುಮ ಜಯಂತಿ ವೈಭವ: ತಾಲೂಕಿನ ಹಿರೀಸಾವೆ ಗ್ರಾಮದ ಉಯ್ಯಲೆ ಕಂಬದ ಬಳಿ ಇರುವ ಹನುಮಂತರಾಯಸ್ವಾಮಿ ದೇವಸ್ಥಾನದಲ್ಲಿ ಎಚ್.ವಿ.ರಾಖೇಶ್ ನೇತೃತ್ವದಲ್ಲಿ ವಿವಿಧ ವಿಶೇ? ಪೂಜೆಗಳನ್ನು ನಡೆಸಲಾಯಿತು.ಹನುಮ ಮೂರ್ತಿಗೆ ಬೆಣ್ಣೆ ಅಲಂಕಾರದ ನಂತರ ಮಹಾ ಮಂಗಳಾರತಿ ಬೆಳಗಿಸಲಾಯಿತು. ಭಕ್ತರಿಗೆ ಪ್ರಸಾದವನ್ನು ವಿತರಿಸಲಾಯಿತು. ಜನ ಪ್ರತಿನಿಧಿಗಳು ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಅನ್ನದಾನವನ್ನು ಏರ್ಪಡಿಸಲಾಗಿತ್ತು..
ನುಗ್ಗೇಹಳ್ಳಿ ರಸ್ತೆಯಲ್ಲಿರುವ ಮುದ್ದೆಕಲ್ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆ ಅರ್ಚಕರಾದ ನವೀನ್ ಭಾರದ್ವಾಜ್ ಮತ್ತು ನಂದನ್ ನೇತೃತ್ವದಲ್ಲಿ ವಿಶೇ? ಪೂಜೆಗಳನ್ನು ನಡೆಸಿದರು. ಮೂರ್ತಿಯಾ ಬೆಣ್ಣೆ ಅಲಂಕಾರ ಭಕ್ತರ ಗಮನ ಸೇಳೆಯಿತು. ಮಧ್ಯಾಹ್ನ ಭಕ್ತರ ಸಹಕರದೊಂದಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.ಹಲವು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹಾಗೂ ವೀರಾಂಜನೇಯ ಸೇವಾ ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.