ತಾಲೂಕಿನ ಸಮಗ್ರ ಅಭಿವೃದ್ಧಿಗೆ ಒತ್ತು

25kgl photo1.
Published on

ಕೊಳ್ಳೇಗಾಲ: ತಾಲೂಕಿನ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ ಎಂದು ಶಾಸಕ ಎನ್.ಮಹೇಶ್ ಹೇಳಿದರು. ಕುಣಗಳ್ಳಿ ಗ್ರಾಮದ ಉಪ್ಪಾರ ಕಾಲನಿಯಲ್ಲಿ ಶುಕ್ರವಾರ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಸಬಾ ಹೋಬಳಿಯ ಮೂರು ಪಂಚಾಯಿತಿಯನ್ನು ಒಳಗೊಂಡಂತೆ 1.95 ಕೋಟಿ ರೂ. ವೆಚ್ಚದಲ್ಲಿ 8 ಗ್ರಾಮಗಳಲ್ಲಿ 11 ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ ಎಂದರು.
ಉತ್ತಂಬಳ್ಳಿ ಗ್ರಾಮದ ಪ. ಜಾತಿಯವರ ಬೀದಿಯಲ್ಲಿ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕಾಗಿ ಸಾಂಕೇತಿಕವಾಗಿ 5ಲಕ್ಷ ರೂ. ಬಿಡುಗಡೆ ಮಾಡಿಸಿದ್ದೇನೆ. ಸಂಪೂರ್ಣ ಕಾಮಗಾರಿಗೆ ಬೇಕಾದ ಅನುದಾನವನ್ನು ಆದಷ್ಟು ಬೇಗ ಬಿಡುಗಡೆಗೊಳಿಸಲು ಶ್ರಮಿಸುತ್ತೇನೆ ಎಂದರು. ಇದೇ ಗ್ರಾಮದ ಲಿಂಗಾಯತ ಸಮುದಾಯದವರ ಬೀದಿ ಮತ್ತು ಉಪ್ಪಾರ ಕಾಲನಿಅಭಿವೃದ್ಧಿಗೆ ತಲಾ 20 ಲಕ್ಷ ರೂ. ನೀಡಲಾಗಿದೆ. ಇಲ್ಲಿ ಸುಸಜ್ಜಿತ ರಸ್ತೆ ಮತ್ತು ಚರಂಡಿ ನಿರ್ಮಾಣವಾಗಲಿದೆ ಎಂದರು.
ಕುಣಗಳ್ಳಿ ಗ್ರಾಮದ ಉಪ್ಪಾರ ಬಡಾವಣೆ ಹಾಗೂ ಲಿಂಗಾಯತರ ಬೀದಿಯಲ್ಲಿ ಸಿಸಿ ರಸ್ತೆ ಚರಂಡಿ ಕಾಮಗಾರಿಗೆ ತಲಾ 20 ಲಕ್ಷ, ಸೂರಪುರ ಗ್ರಾಮದ ಒಕ್ಕಲಿಗರ ಬೀದಿ ಮತ್ತು ಚರಂಡಿ ಅಭಿವೃದ್ಧಿಗೆ 10 ಲಕ್ಷ, ಅರೇಪಾಳ್ಯದ ಒಕ್ಕಲಿಗರ ಬೀದಿ ಅಭಿವೃದ್ಧಿಗೆ 10 ಲಕ್ಷ, ತಿಮ್ಮರಾಜೀಪುರ, ಕೆಂಪನಪಾಳ್ಯ, ಸಿದ್ದಯ್ಯನಪುರದ ಮಹದೇಶ್ವರ ಬಡಾವಣೆಯ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ತಲಾ 20 ಲಕ್ಷ ರೂ. ಬಿಡುಗಡೆಮಾಡಲಾಗಿದೆ ಎಂದು ಶಾಸಕ ಎನ್.ಮಹೇಶ್ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net