ತಾಲೂಕಿನ ಎಲ್ಲ ಹಳ್ಳಿಗೆ ಬಸ್ ಸೌಲಭ್ಯ

2908 Surapur 02
ಸುರಪುರ ತಹಸಿಲ್‌ನಲ್ಲಿ ಸೋಮವಾರ ಕರೆದಿದ್ದ ಸಭೆಯಲ್ಲಿ ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಚಪ್ಪ ಮಾತನಾಡಿದರು. ತಹಸೀಲ್ದಾರ್ ಕೆ.ವಿಜಯಕುಮಾರ, ಸುನೀಲಕುಮಾರ ಚಂದರಗಿ, ಎಂ.ಎಸ್.ಹಿರೇಮಠ, ರಮೇಶ ಪಟೇಲ್, ಬೈಲಪ್ಪ ಇತರರಿದ್ದರು.
Published on

ಸುರಪುರ: ಪ್ರಯಾಣಿಕರ ಅನುಕೂಲಕ್ಕಾಗಿ ತಾಲೂಕಿನ ಪ್ರತಿ ಹಳ್ಳಿಗೂ ಬಸ್ ಸೌಲಭ್ಯ ಕಲ್ಪಿಸುವುದಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರಾಚಪ್ಪ ಹೇಳಿದರು.

ತಹಸಿಲ್ ಕಚೇರಿಯಲ್ಲಿ ಸೋಮವಾರ ಕರೆದಿದ್ದ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಇದುವರೆಗೆ ಬಸ್ ಕಾಣದ ಊರುಗಳಿರುವುದು ಗಮನಕ್ಕೆ ಬಂದಿದೆ. ಯಾವ ಮಾರ್ಗದಿಂದ ಸಂಪರ್ಕ ಕಲ್ಪಿಸಬೇಕು ಎಂಬುದನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಲಿಂಗದಳ್ಳಿ (ಎಸ್‌ಎಚ್)ಗೆ ಇದುವರೆಗೆ ಬಸ್ ಹೋಗಿಲ್ಲ. ಕುಪಗಲ್ ಮೂಲಕ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದು. ವಿದ್ಯಾರ್ಥಿಗಳಿಗೆ ನಗರ ಅಥವಾ ಪಟ್ಟಣಕ್ಕೆ ಬಂದು ಹೋಗಲು ತೊಂದರೆಯಾಗದಂತೆ ಸಾರಿಗೆ ಸೇವೆ ಒದಗಿಸುವುದಾಗಿ ತಿಳಿಸಿದರು.

ತಹಸೀಲ್ದಾರ್ ಕೆ.ವಿಜಯಕುಮಾರ, ವಿಭಾಗೀಯ ನಿಯಂತ್ರಣಾಧಿಕಾರಿ ಸುನೀಲಕುಮಾರ ಚಂದರಗಿ, ವಿಭಾಗೀಯ ಸಂಚಲನಾಧಿಕಾರಿ ಎಂ.ಎಸ್. ಹಿರೇಮಠ, ವಿಭಾಗೀಯ ತಾಂತ್ರಿಕ ಶಿಲ್ಪಿ ಪ್ರಶಾಂತ ಸುರಪುರಕರ, ರಮೇಶ ಪಟೇಲ್, ಬೈಲಪ್ಪ, ಭೀಮಸಿಂಗ್ ರಾಠೋಡ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net