ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟದ ಸ್ಪರ್ಧೆ ಸೆ.14 ರಂದು

Sports Logo
Published on

ಬೆಳಗಾವಿ: 2023-24ನೇ ಸಾಲಿನ ಬೆಳಗಾವಿ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟದ ಸ್ಪರ್ಧೆಗಳ ನ್ನು ಸೆ.14 ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಸ್ಪರ್ಧೆಗಳ ವಿವರ : ಅಥ್ಲೆಟಿಕ್ಸ್ ಪುರುಷರಿಗಾಗಿ 100ಮೀ, 200ಮೀ, 400ಮೀ, 800ಮೀ, 1500ಮೀ, 5000ಮೀ, 10,000ಮೀ, ಓಟ, ಉದ್ದಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್‌ಜಂಪ್, ಜಾವಲಿನ್ ಥ್ರೋ, ಡಿಸ್ಕಸ್ ಥ್ರೋ, 110ಮೀ ಹರ್ಡಲ್ಸ್, 4x100 ರಿಲೇ, ಹಾಗೂ 4x 400 ರಿಲೇ ಸ್ಪರ್ಧೆಗಳು ಹಮ್ಮಿಕೊಳಲಾಗುವುದು. ಅಥ್ಲೆಟಿಕ್ಸ್ ಮಹಿಳೆಯರಿಗಾಗಿ 100ಮೀ, 200ಮೀ, 400ಮೀ, 800ಮೀ, 1500ಮೀ, 3000ಮೀ ಓಟ, ಉದ್ದಜಿಗಿತ, ಎತ್ತರಜಿಗಿತ, ಗುಂಡು ಎಸೆತ, ಟ್ರಪಲ್‌ಜಂಪ್, ಜಾವಲಿನ್ ಥ್ರೋ, ಡಿಸ್ಕಸ್ ಥ್ರೋ, 100 ಮೀ ಹರ್ಡಲ್ಸ್, 4x100 ರಿಲೇ, ಹಾಗೂ 400 ರಿಲೇ ಸ್ಪರ್ಧೆಗಳು ಹಮ್ಮಿಕೊಳ್ಳಲಾಗುವುದು. ಗುಂಪು ಆಟಗಳು: ವಾಲಿಬಾಲ್, ಫುಟಬಾಲ್, ಖೋಖೋ, ಕಬಡ್ಡಿ, ಥ್ರೋ ಬಾಲ್, ಯೋಗ (ಪುರುಷ ಮತ್ತು ಮಹಿಳೆಯರಿಗಾಗಿ)
ನಿಯಮಗಳು: ಭಾಗವಹಿಸುವ ತಾಲೂಕಿನ ಕ್ರೀಡಾಪಟುಗಳು ಸೆ.14 2023 ರಂದು ಬೆಳಗ್ಗೆ 9 ಗಂಟೆಗೆ ಹಾಜರಿದ್ದು ಸಂಘಟಕರಲ್ಲಿ ವರದಿ ಮಾಡಿಕೊಳ್ಳಬೇಕು, ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಬೆಳಗಾವಿ ತಾಲೂಕಿನ ರಹವಾಸಿಯಾಗಿರಬೇಕು, ಕ್ರೀಡಾಕೂಟದಲ್ಲಿ ರಕ್ಷಣಾ ಪಡೆ, ಅರೆ ರಕ್ಷಣಾಪಡೆಗೆ ಸೇರಿದ ಕ್ರೀಡಾಪಟುಗಳು ಭಾಗವಹಿಸಲು ಅರ್ಹರಾಗಿರುವುದಿಲ್ಲ, ಕ್ರೀಡಾಕೂಟದಲ್ಲಿ ತಾಲೂಕಿನ ಶಾಲಾ ಕಾಲೇಜು, ಯುವಕ ಯುವತಿಯರು ಸಂಘಗಳ ಹಾಗೂ ಕ್ರೀಡಾ ಸಂಘ ಸಂಸ್ಥೆಗಳ ಕ್ರೀಡಾಪಟುಗಳು ಭಾಗವಹಿಸಬಹುದು ಹಾಗೂ ಭಾಗವಹಿಸುವ ಕ್ರೀಡಾ ಪಟುಗಳು ತಮ್ಮ ಬ್ಯಾಂಕ್ ಪಾಸ್‌ಬುಕ್ ಪ್ರತಿ ಮತ್ತು ಆಧಾರ್ ಕಾರ್ಡ್ ಪ್ರತಿಯನ್ನು ಕಡ್ಡಾಯವಾಗಿ ತರಬೇಕು. ಒಂದು ತಾಲೂಕಿನಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಮತ್ತೊಂದು ತಾಲೂಕಿನಲ್ಲಿ ಭಾಗವಹಿಸವುಂತಿಲ್ಲ. ಒಂದು ವೇಳೆ ಭಾಗವಹಿಸಿದ್ದ. ಅಂತವರ ಆಯ್ಕೆಯನ್ನು ರದ್ದುಗೊಳಸಲಾಗುವುದು, ನಿರ್ಣಾಯಕರ ನಿರ್ಣಯವೇ ಅಂತಿಮ ವಾಗಿದ್ದು, ಕ್ರೀಡಾಕೂಟದಲ್ಲಿ ಅಸಭ್ಯವಾಗಿ ವರ್ತಿಸಿದ ಕ್ರೀಡಾಪಟು ಅಥವಾ ತಂಡಗಳನ್ನು ಅನರ್ಹಗೊಕಲಾಗುವುದು, ಭಾಗವಹಿಸುವ ಕ್ರೀಡಾಪಟುಗಳಿಗೆ ಇಲಾಖೆಯ ವತಿಯಿಂದ ಯಾವುದೇ ಪ್ರಯಾಣ ಭತ್ಯೆ ಹಾಗೂ ದಿನ ಭತ್ಯೆಯನ್ನು ನೀಡಲಾಗುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ. 0831-2950306 ಗೆ ಸಂಪರ್ಕಿಸಬಹುದಾಗಿದೆ ಎಂದು ಬೆಳಗಾವಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net