

ಗಂಧನಹಳ್ಳಿ: ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ತಾರಾ ಹರೀಶ್ ಹಾಗೂ ಉಪಾಧ್ಯಕ್ಷರಾಗಿ ಡಿ.ಅನಂತಕುಮಾರ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ತಾರಾ ಹರೀಶ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಡಿ.ಅನಂತಕುಮಾರ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಇವರಿಬ್ಬರ ಅವಿರೋಧ ಆಯ್ಕೆಯನ್ನು ಚುನಾವಣಾ ಅಧಿಕಾರಿಯಾದ ಸಿಡಿಪಿಒ ಪೂರ್ಣಿಮಾ ಘೋಷಣೆ ಮಾಡಿದರು. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಸದಸ್ಯರು, ಮುಖಂಡರು ಹಾಗೂ ಗ್ರಾಮಸ್ಥರು ಅಭಿನಂದಿಸಿದರು. ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು.
ಸದಸ್ಯರಾದ ರಾಜಮ್ಮ, ಜಿ.ಎಸ್.ಸಣ್ಣದೊಡ್ಡೇಗೌಡ, ಭಾಗ್ಯಜ್ಯೋತಿ, ಜಿ.ಸಿ.ಸತೀಶ್, ಡಿ.ಅನಂತಕುಮಾರ, ರುಕ್ಮಿಣಿ, ಮಹಾದೇವಿ, ಜಿ.ಆರ್.ಲೋಕೇಶ, ಸುಲೋಚನಾ, ಜಿ.ಪಿ.ಮಂಗಳಮ್ಮ, ಜಿ.ಎಸ್.ರಾಜೇಗೌಡ, ಜಿ.ಕೆ.ಕುಮಾರ, ತಾರಾ, ಜಯರಾಮೇಗೌಡ, ಪಿಡಿಒ ಕೆ.ಸರಳಾ, ಗ್ರಾಮದ ದೊಡ್ಡ ಯಜಮಾನ ಜಿ.ಎನ್.ರಘು, ತಾ.ಪಂ. ಮಾಜಿ ಸದಸ್ಯರಾದ ಗಾಂಧಿ ಶಿವಣ್ಣ, ಜಿ.ಆರ್.ಮಹದೇವ, ಜಿ.ಎನ್.ಮಂಜುನಾಥ್, ಜಿ.ಕೆ.ಮಹದೇವ್, ಜಿ.ಎಲ್.ಚಿಕ್ಕೇಗೌಡ, ಜಯರಾಮೇಗೌಡ ಇತರರು ಇದ್ದರು.