

-------
ಜಿಲ್ಲಾ ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ.ಶಿವಕುಮಾರ್ ಮಾತನಾಡಿ, ಸ್ವಸ್ಥ್ಯನಾರಿ ಸಶಕ್ತ ಪರಿವಾರ ಎಂಬಂತೆ ನಾರಿಯರನ್ನು ಚೆನ್ನಾಗಿ ನೋಡಿಕೊಂಡರೆ ಸಶಕ್ತ ಆರೋಗ್ಯವಂತ ಪರಿವಾರ ಆಗುವುದು ಎಂದರು. ಆಯುಷ್ ಇಲಾಖೆಯಿಂದ ಹಾಜರಿದ್ದ ನೂರು ಗರ್ಭಿಣಿಯರಿಗೆ ಚ್ಯವನಪ್ರಾಶ್ ವಿತರಿಸಲಾಯಿತು. ಜಿಲ್ಲಾ ಆಸ್ಪತ್ರೆಯ ಹೆರಿಗೆ ಮತ್ತು ಸ್ತ್ರಿ ರೋಗ ತಜ್ಞೆ ಭಾಗ್ಯಜ್ಯೋತಿ,ಸರ್ಕಾರಿ ವೈದ್ಯಕೀಯ ಕಾಲೇಜಿನ ಡಾ.ಅಶ್ವಿ ನಿ,ಡಾ.ಶಾಂತಾ,ಡಾ.ಪ್ರಭುದೇವ ಬಣಕಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್,ವೈದ್ಯಾಧಿಕಾರಿ ಡಾ.ಸುರೇಂದ್ರ ಕುಮಾರ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ ನಾಗಸಮುದ್ರ ಇತರರು ಇದ್ದರು.
ಚಿತ್ರದುರ್ಗ: ಜಿಲ್ಲೆಯಲ್ಲಿ ತಾಯಿ ಮರಣ ಮತ್ತು ಶಿಶು ಮರಣ ಪ್ರಮಾಣ ತಗ್ಗಿಸುವ ನಿಟ್ಡಿನಲ್ಲಿ ನಾವೆಲ್ಲರೂ ಬಹುಮುಖ್ಯ ಪಾತ್ರ ವಹಿಸಬೇಕಿದೆ ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಹೇಳಿದರು. ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು ಆರೋಗ್ಯ ಇಲಾಖೆ ಸಂಯುಕ್ತ ಆಶ್ರಯ ದ ಲ್ಲಿ ಬುದ್ಧ ನಗರ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಏರ್ಪಡಿಸಿದ್ದ ಗರ್ಭಿಣಿ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿ,ಏಳು ವಾರಗಳ ಗರ್ಭಿ ಣಿ ಎಂದು ತಿಳಿದ ಮೇಲೆ ಅತೀ ಜಾಗರೂಕತೆಯಿಂದ ಅವರನ್ನು ನೋಡಿಕೊಳ್ಳಬೇಕಿದೆ. ಆರೋಗ್ಯವಂತ ಮಹಿಳೆಯಿಂದ ಆರೋಗ್ಯವಂತ ಮ ಗು ಜನಿಸಲು ಸಾಧ್ಯ. ಗರ್ಭಿಣಿಯರಲ್ಲಿ ಈಚೆಗೆ ಹಿಮೋಗ್ಲೊಬಿನ್ ಕಡಿಮೆಯಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಇದನ್ನು ಸರಿಪಡಿಸಬೇಕಿದೆ ಎಂದರು.