ತಾಯಿಯನ್ನೆ ಕೊಂದ ಮಗ

crime
Published on

ಹುಮನಾಬಾದ್: ಹೆತ್ತ ತಾಯಿಯನ್ನೆ ಮಗ ಕೊಡಲೆಯಿಂದ ಹೊಡೆದು, ತೀವ್ರ ಗಾಯಗೊಳಿಸಿ ಕೊಲೆ ಮಾಡಿರುವ ಘಟನೆ ಪಟ್ಟಣದ ಚೆಟ್ಟಿ ಗಲ್ಲಿಯಲ್ಲಿ ಮಂಗಳವಾರ ನಡೆದಿದೆ. ಶಂಕುತಲಾ ಸಿಂಧೆ(೫೫) ಮೃತ ತಾಯಿ. ಪುತ್ರ ದೀಪಕ ಕುಡಿತಕ್ಕೆ ಹಣ ನೀಡುವಂತೆ ತಾಯಿಯೊಂದಿಗೆ ಜಗಳ ತೆಗೆದು ಕೊಡಲಿಯಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದೇನೆ. ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಎಸ್‌ಪಿ ಚನ್ನಬಸವಣ್ಣ ಎಸ್‌ಎಲ್, ಹೆಚ್ಚುವರಿ ಎಸ್‌ಪಿ ಮಹೇಶ ಮೇಘಣ್ಣವರ್, ಪ್ರಭಾರಿ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ಸಿಪಿಐ ಗುರು ಪಾಟೀಲ್, ಪಿಎಸ್‌ಐ ತಿಮ್ಮಯ್ಯ, ವಿಧಿವಿಜ್ಱಆನ ತಂಡದೊಂದಿಗೆ ಭೇಟಿ ನೀಡಿ ಪರಿಶೀಲಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net