ತಾಯಿಯ ಹಾಲಿನಿಂದ ಮಗುವಿಗೆ ಅಮೃತ

Milk
Published on

ಚಿತ್ರದುರ್ಗ: ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ದೈಹಿಕ ಆರೋಗ್ಯ ವೃದ್ಧಿಗೆ ತಾಯಿ ಹಾಲು ಅಮೃತವಿದ್ದಂತೆ ಎಂದು ಎಸ್‌ಜೆಎಂ ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಡಾ.ಟಿ.ಎಸ್.ನಾಗರಾಜ್ ತಿಳಿಸಿದರು.

ಕಾಲೇಜಿನಿಂದ ವಿಶ್ವ ಸ್ತನಪಾನ ಸಪ್ತಾಹ ಅಂಗವಾಗಿ ನಗರದ ತಮಟಕಲ್ಲು ಅಂಗನವಾಡಿ ಕೇಂದ್ರದಲ್ಲಿ ಈಚೆಗೆ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭೂಮಿಯ ಮೇಲೆ ಎಲ್ಲವೂ ಕಲುಷಿತಗೊಂಡಿದ್ದು, ಅನೇಕ ರೋಗಗಳು ಹರಡುತ್ತಿವೆ. ಹೀಗಾಗಿ ಮಗುವಿನ ಬೆಳವಣಿಗೆ ದೃಷ್ಟಿಯಿಂದ ತಾಯಿ ಹಾಲು ಬಹಳ ಮುಖ್ಯ ಎಂದರು.

ಔಷಧೋಪಚಾರ ವಿಭಾಗದ ಮುಖ್ಯಸ್ಥ ಡಾ.ಆರ್.ಯೋಗಾನಂದ ಮಾತನಾಡಿ, ಯಾಂತ್ರಿಕ ಬದುಕು, ಯುವಸಮೂಹ ಎದೆ ಹಾಲು ಉಣಿಸುವಲ್ಲಿ ಹಿಂದೆ ಉಳಿದಿದ್ದು, ಇದರಿಂದ ಮಗುವಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯಪಟ್ಟರು.

ಬಸವೇಶ್ವರ ವೈದ್ಯಕೀಯ ಕಾಲೇಜಿನ ಡಾ.ವಿ.ಲತಾ, ಡಾ.ವಿಜಯಕುಮಾರ್, ಡಾ.ಬಸವರಾಜ್, ಡಾ.ಸ್ನೇಹಲತಾ, ಡಾ.ಸೌಮ್ಯಾ, ಎಚ್‌ಐಒ ಪ್ರಶಾಂತ್, ಸಿಎಚ್‌ಒ ಶಬಾನಬಾನು, ಗ್ರಾಪಂ ಅಧ್ಯಕ್ಷೆ ರುದ್ರಮ್ಮ, ಸದಸ್ಯ ಸಣ್ಣ ಹನುಮಂತಪ್ಪ, ಮುಖಂಡರಾದ ದೊಡ್ಡ ಕರಿಬಸಪ್ಪ, ಕೆಂಚಣ್ಣ, ಬಿ.ಟಿ.ಸಾಕಮ್ಮ, ಬಿ.ಸಿ.ಪೂಜಾ, ಸುಷ್ಮಾ, ಅನುಷಾ, ಶಮಂತಕಮಣಿ, ಆಶಾ ಕಾರ್ಯಕರ್ತೆಯರಾದ ಶಿವಮಾಲಾ, ಗೀತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net