ತಾಯಿಯ ಎದೆಹಾಲು ಅಮೃತಕ್ಕೆ ಸಮಾನ

02-08-Shiva-4
ರಾಯಚೂರಿನ ನಗರ ಪ್ರಸೂತಿ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಸ್ತನ್ಯಪಾನ ದಿನಾಚರಣೆ ಕಾರ್ಯಕ್ರಮವನ್ನು ಕೇಂದ್ರದ ಮುಖ್ಯ ವೈದ್ಯಾಕಾರಿ ಡಾ.ಕೆ.ವಿಜಯಾ ಉದ್ಘಾಟಿಸಿದರು. ತಾಲೂಕು ಆರೋಗ್ಯಾಕಾರಿ ಡಾ.ಎಂ.ಡಿ.ಶಾಕೀರ, ಜಿಲ್ಲಾ ಆರೋಗ್ಯ ಶಿಕ್ಷಣಾಕಾರಿ ಲಕ್ಷ್ಮಿ ಮುಂಡಾಸ್, ಆರೋಗ್ಯ ಸುರಕ್ಷಣಾಕಾರಿಗಳಾದ ಶಶಿಕಲಾ, ಡಾ.ಕಾವ್ಯ, ಡಾ.ಚೇತನಾ ಇದ್ದರು.
Published on

ರಾಯಚೂರು: ತಾಯಿಯ ಎದೆ ಹಾಲು ಮಗುವಿಗೆ ಅಮೃತಕ್ಕೆ ಸಮಾನವಾಗಿದೆ. ಆದರೆ ಕೆಲವು ತಾಯಂದಿರು ತಮ್ಮ ಸೌಂದರ್ಯ ಹಾಳಾಗುತ್ತದೆ ಎಂದು ಮಕ್ಕಳಿಗೆ ಎದೆ ಹಾಲು ಕುಡಿಸುವುದನ್ನು ಬಿಡುವುದು ಸರಿಯಲ್ಲ ಎಂದು ನಗರದ ಪ್ರಸೂತಿ ಕೇಂದ್ರದ ಮುಖ್ಯ ವೈದ್ಯಾಕಾರಿ ಡಾ.ಕೆ.ವಿಜಯಾ ಹೇಳಿದರು.
ಸ್ಥಳೀಯ ಪ್ರಸೂತಿ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಸ್ತನ್ಯಪಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ತಾಯಿಯ ಎದೆ ಹಾಲನಷ್ಟು ಪೋಷಕಾಂಶ ಭರಿತ ಆಹಾರ ಭೂಮಿ ಮೇಲೆ ಯಾವುದು ಇಲ್ಲ. ಜತೆಗೆ ಮಗುವಿಗೆ ರೋಗ ನಿರೋಧಕ ಶಕ್ತಿ ಹೆಚ್ಚುವಂತೆ ಮಾಡುತ್ತದೆ ಎಂದರು.
ಹೆರಿಗೆಯಾದ ಒಂದು ಗಂಟೆಯೊಳಗೆ ಮಗುವಿಗೆ ತಾಯಿಯ ಎದೆ ಹಾಲನ್ನು ಉಣಿಸಬೇಕು. ಆರು ತಿಂಗಳವರೆಗೆ ಎದೆ ಹಾಲನ್ನು ಮಗುವಿಗೆ ನೀಡುತ್ತಿರಬೇಕು. ಎದೆ ಆಹಲು ಹೊರತುಪಡಿಸಿ ಬೇರೆ ಯಾವುದೇ ಇನ್ನೀತರ ಪಾನೀಯಗಳನ್ನು ಮಗುವಿದೆ ನೀಡಬೇಕು. ಎದೆ ಹಾಲು ಉಣಿಸುವುದು ಪ್ರತಿಯೊಬ್ಬ ತಾಯಿಯ ಕರ್ತವ್ಯವಾಗಿದೆ ಎಂದು ಹೇಳಿದರು.
ತಾಲೂಕು ಆರೋಗ್ಯಾಕಾರಿ ಡಾ.ಎಂ.ಡಿ.ಶಾಕೀರ ಮಾತನಾಡಿ, ಮಗುವಿಗೆ ಎದೆ ಹಾಲು ಉಣಿಸುವುದರಿಂದ ನ್ಯೂಮೋನಿಯಾ, ಅತಿಸಾರ ಬೇ, ಅಪೌಷ್ಠಿಕತೆಯಿಂದ ತಡೆಯಬಹುದಾಗಿದೆ. ಕಾರಣ ತಾಯಂದಿರು ಮಕ್ಕಳಿಗೆ ತಪ್ಪದೇ ಎದೆ ಹಾಲು ಉಣಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಕಾರಿ ಲಕ್ಷ್ಮಿ ಮುಂಡಾಸ್ ಮಾತನಾಡಿ, ಇಂದಿನ ದಿನಗಳಲ್ಲಿ ಕೆಲಸ ಮಾಡುವ ಮಹಿಳೆಯರು ಎದೆ ಹಾಲು ಉಣಿಸಲು ಹೆಚ್ಚಿನ ಗಮನ ಹರಿಸುವುದಿಲ್ಲ. ಎದೆ ಹಾಲಿನಿಂದ ಮಗು ಮಾನಸಿಕವಾಗಿ, ದೈಹಿಕವಾಗಿ ಬೆಳೆಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ಸುರಕ್ಷಣಾಕಾರಿಗಳಾದ ಶಶಿಕಲಾ, ಡಾ.ಕಾವ್ಯ, ಡಾ.ಚೇತನಾ, ಮಲ್ಲೇಶ್ವರಿ ಹಾಗೂ ಆಶಾ ಕಾರ್ಯಕರ್ತೆಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net