ತಾಯಿ ಹೆಸರಲ್ಲಿ ಸಸಿ ನೆಟ್ಟ ಬಿಜೆಪಿಗರು

Oplus_131072
Oplus_131072
Published on

ಶಹಾಪುರ: ನಗರದ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ೧೧ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿವಿಧ ಕರ‍್ಯಕ್ರಮ ಜರುಗಿದವು.

ವಿಕಸಿತ ಭಾರತದ ಅಮೃತಕಾಲ, ಸೇವೆ, ಸುಶಾಸನ ಮತ್ತು ೧೧ ವರ್ಷ ಸಾಧನೆ ಕುರಿತ ಕಾರ್ಯಾಗಾರ ಮತ್ತು ವಿಶ್ವ ಪರಿಸರ ದಿನ ನಿಮಿತ್ತ ತಾಯಿ ಹೆಸರಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ, ಮಾಜಿ ಅಧ್ಯಕ್ಷ ಅಮೀನ್ ರಡ್ಡಿ ಯಾಳಗಿ ಚಾಲನೆ ನೀಡಿದರು.

ಭವ್ಯ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ೧೧ವರ್ಷದ ಮಹೋನ್ನತ ಸಾಧನೆ, ಬಡಜನರ ಪರವಾದ ಯೋಜನೆಗಳು, ರೈತ ಸ್ನೇಹಿ, ಸೈನ್ಯ ಬಲ ಹೆಚ್ಚಿಸುವ ಹಾಗೂ ದೇಶ ಸುಭದ್ರತೆಗಾಗಿ ರೂಪಿಸಿದ ಹಲವಾರು ಯೋಜನೆಗಳ ಕುರಿತು ಜನಸಾಮಾನ್ಯರಿಗೆ ತಿಳಿಸುವ ಕೆಲಸ ಮಾಡಲಾಯಿತು.

ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ವಿಭೂತಿಹಳ್ಳಿ, ಕೇಂದ್ರ ಸರ್ಕಾರದ ಅಭಿವೃದ್ಧಿ ಕೆಲಸಗಳು ಮತ್ತು ಪ್ರಧಾನಿ ಮೋದಿ ಅವರ ಸಾಧನೆ ಮನೆ, ಮನೆಗೆ ತಲುಪಿಸುವ ಕೆಲಸ ಕಾರ್ಯಕರ್ತರು ಮತ್ತು ಮುಖಂಡರು ಮಾಡಬೇಕು ಎಂದು ಹೇಳಿದರು.

ಮಾಜಿ ಜಿಲ್ಲಾಧ್ಯಕ್ಷ ಅಮೀನ್ ರಡ್ಡಿ ಯಾಳಗಿ ಮಾತನಾಡಿ, ನರೇಂದ್ರ ಮೋದಿ ಅವರು ದೇಶದ ಆಡಳಿತದ ಚುಕ್ಕಾಣಿ ಹಿಡಿದ ಮೇಲೆ ದೇಶ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದರು.

ಈ ವೇಳೆ ನಗರ ಮಂಡಲ ಅಧ್ಯP್ಷÀ ಚಂದ್ರಶೇಖರ ಯಾಳಗಿ, ಗ್ರಾಮೀಣ ಮಂಡಲ ಅಧ್ಯP್ಷÀ ತಿರುಪತಿ ಹತ್ತಿಕಟಿಗಿ, ಜಿ¯್ಲÁ ಪ್ರಧಾನ ಕಾರ್ಯದರ್ಶಿ ಗುರು ಕಾಮಾ, ಪರಶುರಾಮ ಕುರಕುಂದಾ, ಕಾರ್ಯಗಾರದ ಜಿ¯್ಲÁ ಸಂಚಾಲಕ ರಾಜುಗೌಡ ಉಕ್ಕಿನಾಳ, ಜಿ¯್ಲÁ ಉಪಾಧ್ಯP್ಷÀ ಅಡಿವೆಪ್ಪ ಜಾಕಾ, ಹಿರಿಯ ಮುಖಂಡ ಮಲ್ಲಿಕಾರ್ಜುನ ಚಿ¯್ಲÁಳ, ಶಿವರಾಜ ದೇಶಮುಖ ಯಲ್ಲಯ್ಯ ನಾಯ್ಕ ವನದುರ್ಗ, ದಾಮು ಬಿ. ಪವಾರ, ಶಾಂತಕುಮಾರ ನಾಗನಟಿಗಿ, ಮೌನೇಶ ಹಯ್ಯಾಳಕರ, ಬಾಲಕೃಷ್ಣ ಹುಲಕಲï, ವೆಂಕಟೇಶ ಗೌನಳ್ಳಿ ಸೇರಿ ಪಕ್ಷದ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net