

ವಿಜಯಪುರ:ತಾಯಿ ಎದೆಹಾಲು ಅಮೃತಕ್ಕೆ ಸಮಾನ. ಸದೃಢ ಮಗುವಿನ ಆರೋಗ್ಯದ ದೃಷ್ಟಿಯಿಂದ ತಾಯಂದಿರು ನವಜಾತ ಶಿಶುಗಳಿಗೆ ಸ್ತನ್ಯಪಾನ ನೀಡುವಲ್ಲಿ ರ್ನಿಲಕ್ಷ ಮಾಡಬಾರದು ಎಂದು ಜಿಲ್ಲಾಸ್ಪತ್ರೆ ಶಸಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ ಹೇಳಿದರು.
ಜಿಲ್ಲಾಡಳಿತ, ಜಿ.ಪಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಸ್ಪತ್ರೆಗಳ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಶ್ವ ಸ್ತನ್ಯಪಾನ ಸಪ್ತಾಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಯಿ ತನ್ನ ಮಗುವಿಗೆ ಎದೆಹಾಲು ಉಣಿಸುವುದರಿಂದ ಮಗುವಿನ ಆರೋಗ್ಯದಲ್ಲಿ ಧನಾತ್ಮಕ ಪರಿಣಾಮಗಳಾಗುತ್ತವೆ. ಮಗುವಿನ ಬುದ್ಧಿಶಕ್ತಿ ಹೆಚ್ಚಿಸುತ್ತದೆ. ಅಲ್ಲದೆ, ಮಗುವಿಗೆ ಹಾಲುಣಿಸುವಿಕೆಯಿಂದ ಸಾಂಕ್ರಾಮಿಕ ಕಾಯಿಲೆಗಳು, ಅತಿಸಾರ, ಉಸಿರಾಟದ ಸೋಂಕುಗಳನ್ನು ದೂರವಿಡಬಹುದು ಎಂದು ಡಾ. ಶಿವಾನಂದ ಮಾಸ್ತಿಹೊಳಿ ಸಲಹೆ ನೀಡಿದರು.
ಆರ್ಎಂಒ ಡಾ. ಸುರೇಶ ಚವ್ಹಾಣ ಮಾತನಾಡಿ, ತಾಯಿ ಹಾಗೂ ಸ್ತನ್ಯಪಾನದ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಅಗತ್ಯವಿದೆ. ತಾಯಿ ಹಾಲಿಗೆ ಪ್ರಪಂಚದಲ್ಲಿ ಬೆಲೆ ಕಟ್ಟಲು ಸಾಧ್ಯವಿಲ್ಲ. ಪ್ರತಿಯೊಬ್ಬ ತಾಯಿಯು ತನ್ನ ಮಗುವಿಗೆ ಎದೆ ಹಾಲು ಉಣಿಸುವ ಮೂಲಕ ದೇಶದ ಆರೋಗ್ಯವಂತ ಪ್ರಜೆಯಾಗಿ ರೂಪಿಸಬೇಕು. ಹುಟ್ಟಿದ ಮಗುವಿಗೆ ಆರು ತಿಂಗಳ ತನಕ ತಾಯಿಯ ಹಾಲಷ್ಟೇ ಕೊಡಬೇಕು. ಅದರಿಂದ ಶೇ. 25ರಷ್ಟು ಶಿಶು ಮರಣ ಕಡಿಮೆ ಮಾಡಬಹುದು ಎಂದರು.
ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ. ಪರಸುರಾಮ ಹಿಟ್ನಳ್ಳಿ ಹಾಗೂ ಚಿಕ್ಕ ಮಕ್ಕಳ ತ ಡಾ. ಯಲಗೂರಸ್ವಾಮಿ ಮಾತನಾಡಿದರು.
ಚಿಕ್ಕ ಮಕ್ಕಳ ತರಾದ ಡಾ. ಸುಧೀರ ಚವಾಣ, ಡಾ. ವಿನಯ, ಡಾ. ಶೈಲಾಶ್ರೀ, ಡಾ. ರವಿ ಬರಡೋಲ, ಮಾರ್ಗಸೂಚಕ ರಮೇಶ ರಾಠೋಡ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಎಂ. ಕೋಲೂರ, ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿ ಮೊತಿಲಾಲ ಚವ್ಹಾಣ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೇಖಾ ದಶವಂತ ಮತ್ತಿತರರಿದ್ದರು. ಡಾ. ಸುಧೀರ ಚವ್ಹಾಣ ವಂದಿಸಿದರು.
ವಿಜಯಪುರದ ಜಿಲ್ಲಾಸ್ಪತ್ರೆಯಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ನಡೆಯಿತು. ಡಾ. ಶಿವಾನಂದ ಮಾಸ್ತಹೊಳಿ, ಡಾ. ಸುರೇಶ ಚವ್ಹಾಣ ಡಾ. ಶೈಲಾಶ್ರೀ ಮತ್ತಿತರರಿದ್ದಾರೆ.