ತಾಯಿ ಯಲ್ಲಮ್ಮ ನಮ್ಮ ಕುಲದೇವತೆ

5
Published on

ಉಗರಗೋಳ: ಗದಗ ಜಿಲ್ಲೆಯ ರೋಣ ೇತ್ರದ ಶಾಸಕ ಜಿ.ಎಸ್​. ಪಾಟೀಲ ಅವರು ತಾಯಿ ಬಸಮ್ಮ ಹರಕೆಯಂತೆ, ಯಲ್ಲಮ್ಮನಗುಡ್ಡದ ಉಗರಗೋಳ ರಸ್ತೆಯಲ್ಲಿ 40 ಲ ರೂ. ವೆಚ್ಚದ ಬೃಹತ್​ ಮಹಾದ್ವಾರ ನಿರ್ಮಿಸಲು ಮುಂದಾಗಿದ್ದಾರೆ.

ಬುಧವಾರ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಸವದತ್ತಿ ಯಲ್ಲಮ್ಮ ದೇವಿ ನಮ್ಮ ಕುಲದೇವತೆ. ಕುಟುಂಬಕ್ಕೆ ಒಳಿತಾದರೆ ಮಹಾದ್ವಾರ ನಿರ್ಮಿಸಿಕೊಡುವುದಾಗಿ ನಮ್ಮ ತಾಯಿ ಹರಕೆ ಹೊತ್ತಿದ್ದರು. ಅವರ ಹರಕೆಯಂತೆ ಈ ಕಾಮಗಾರಿ ಆರಂಭಿಸಿದ್ದೇನೆ. ಮಹಾದ್ವಾರ ಉದ್ಘಾಟಿಸುವ ಜತೆಗೆ, ತಾಯಿ ಸ್ಮರಣೋತ್ಸವವನ್ನೂ ಇಲ್ಲಿಯೇ ಆಚರಿಸಲಾಗುವುದು. ಎಲ್ಲರೂ ಗುಡ್ಡದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.
ಐ.ಎಸ್​.ಪಾಟೀಲ, ಈರಮ್ಮ ಪಾಟೀಲ, ಅನ್ನಪೂರ್ಣ ನಾಡಗೌಡ್ರ, ಕೆ.ಕೆ.ಪಾಟೀಲ, ಎಸ್​.ಎಂ.ಗೌಡರ, ಶರಣಬಸಪ್ಪ ಗುಡಿಮನಿ, ಶಿದ್ಲಿಂಗಪ್ಪ ಚಲಗೇರಿ, ಶಿವಾನಂದ ಬಳ್ಳಾರಿ, ವೀರಯ್ಯ ಸೋಮನಕಟ್ಟಿಮಠ, ಪ್ರೊ.ವೀರೇಶ ಹಿತ್ತಲಮನಿ, ಆರ್​.ಜಿ.ಚಿಕ್ಕಮಠ, ಬಸವರಾಜ ನವಲಗುಂದ, ನಾಗರಾಜ ಬಡೆಪ್ಪನವರ, ಹನಮಂತ ಸಿದ್ದಕ್ಕನವರ, ಸಂತೋಷ ಕಲಾಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net