ತಾಯಿ-ಮಗು ಆಸ್ಪತ್ರೆಗೆ ಸಂಸದೆ ಪ್ರಿಯಾಂಕಾ ಭೇಟಿ

2Anand3
Published on

ತಾಯಿ-ಮಗು ಆಸ್ಪತ್ರೆಗೆ ಸಂಸದೆ ಪ್ರಿಯಾಂಕಾ ಭೇಟಿ

ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ:

ಇಲ್ಲಿನ ಬಾಣಂತಿಕೋಡಿಯಲ್ಲಿರುವ ತಾಯಿ-ಮಗು ಆಸ್ಪತ್ರೆಗೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಮಂಗಳವಾರ ಭೇಟಿ ನೀಡಿ ಆಸ್ಪತ್ರೆಯ ವ್ಯವಸ್ಥೆ ಕುರಿತು ಪರಿಶೀಲಿಸಿದರು.

ಆಸ್ಪತ್ರೆಯಲ್ಲಿನ ಬಾಣಂತಿ ಹಾಗೂ ಶಸ್ತ್ರಚಿಕಿತ್ಸೆ,ಸ್ಕ್ಯಾನಿಂಗ ಕೇಂದ್ರ,ರಕ್ತ ತಪಾಸಣಾ ಹಾಗೂ ಇತರೆ ಕೇಂದ್ರಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಮಾಹಿತಿ ಪಡೆದುಕೊಂಡರು.

ಆಸ್ಪತ್ರೆಯಲ್ಲಿ ಚಿಕ್ಕಮಕ್ಕಳ ತಜ್ಞರು ಹಾಗೂ ರಕ್ತ ತಪಾಸಣೆ ಸಿಬ್ಬಂದಿ ಕೊರತೆ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವದು ಎಂದರು.

ಗರ್ಭಿಣಿಯರಿಗೆ ತೊಂದರೆ ಆಗುತ್ತಿರುವದನ್ನು ಮನಗಂಡು ತಾಯಿ-ಮಗು ಆಸ್ಪತ್ರೆಗೆ ಅಂಬುಲೆನ್ಸ್ ನೀಡಿರುವೆ ಅದರ ಸದುಪಯೋಗ ಮಾಡಿಕೊಳ್ಳುವಂತೆ ತಿಳಿಸಿದರು.

ಸ್ತ್ರೀರೋಗ ತಜ್ಞೆ ಡಾ.ಜಯಲಕ್ಷ್ಮೀ ಮುಸಾಳೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net