ತಾಯಿ ತನ್ನ ಮಗುವಿನೊಂದಿಗೆ ನಾಲೆಗೆ ಹಾರಿ ಆತ್ಮಹತ್ಯೆ

ತಾಯಿ ತನ್ನ ಮಗುವಿನೊಂದಿಗೆ ನಾಲೆಗೆ ಹಾರಿ ಆತ್ಮಹತ್ಯೆ
Published on

ಹೊಳೆನರಸೀಪುರ : ತಾಯಿ ತನ್ನ ಮಗುವಿನೊಂದಿಗೆ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ದೊಡ್ಡ ಕುಂಚೇವು ಕೊಪ್ಪಲು ಗ್ರಾಮದಲ್ಲಿ ಶನಿವಾರ ಸಂಭವಿಸಿದೆ.

ತಾಲೂಕಿನ ಹಳೆಕೋಟೆ ಹೋಬಳಿಯ ದೊಡ್ಡ ಕುಂಚೆವು ಕೊಪ್ಪಲು ಗ್ರಾಮದ ಶ್ರೀನಿವಾಸ ಎಂಬ ವ್ಯಕ್ತಿಯ ಹೆಂಡತಿ ಭವ್ಯ ವಯಸ್ಸು 20 ತನ್ನ 3 ವರ್ಷದಗಂಡು ಮಗು ವೇದಾಂತ ಗೌಡ ಜೊತೆ ಆತ್ಮಹತ್ಯೆಗೆ ಶರಣಾಗಿರುವ ದುರ್ದೈವುಗಳಾಗಿದ್ದಾರೆ.

ಶನಿವಾರ ಸುಮಾರು 12 ಗಂಟೆ ಸಮಯದಲ್ಲಿ ತನ್ನ ಮಗುವನ್ನು ಅಂಗನವಾಡಿ ಕೇಂದ್ರದಿಂದ ಕರದೊಯ್ದು ಗ್ರಾಮದ ಸಮೀಪದಲ್ಲಿ ಇರುವ ಕಾಲುವೆ ಕಡೆ ತೆರಳಿದ್ದಾಳೆ ಗ್ರಾಮದ ಕೆಲವರು ಆಕೆಯನ್ನ ಗಮನಿಸಿ ಕೂಗಿಕೊಂಡು ಹಿಂಬಾಲಿಸಿದ್ದಾದರೂ ಯಾರ ಕೂಗಿಗೂ ಕಿವಿಗೊಡದ ಭವ್ಯ ತನ್ನ ಗಂಡು ಮಗುವನ್ನು ತಬ್ಬಿಕೊಂಡು ತುಂಬಿ ಹರಿಯುತ್ತಿರುವ ಹೇಮಾವತಿ ಎಡದಂಡ ನಾಲೆಗೆ ಜಿಗಿದಿದ್ದಾಳೆ ಸಮೀಪ ವರ್ತಿಗಳ ಕೂಗಿಗೆ ಅಲ್ಲೇ ಇದ್ದ ಶ್ರೀನಿವಾಸನ ಅಣ್ಣ ಮುಂಜೇಗೌಡ ರಕ್ಷಿಸಲು ಮುಂದಾಗಿದ್ದಾನಾದರೂ ರಭಸವಾಗಿ ಹರಿಯುತ್ತಿದ್ದ ಕಾಲುವೆ ನೀರಲ್ಲಿ ತಾಯಿ ಮಗು ಮುಳುಗಿ ಕೊಚ್ಚಿಕೊಂಡು ಹೋಗಿದ್ದಾರೆ ಗ್ರಾಮಸ್ಥರು ಕಾಲುವೆಗೆ ಇಳಿದ ಮಂಜೇಗೌಡನನ್ನು ರಕ್ಷಣೆ ಮಾಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ತಾಯಿ ಮಗು ನೀರಲ್ಲಿ ಕೊಚ್ಚಿ ಹೋದ ವಿಚಾರ ತಿಳಿದು ರಕ್ಷಣೆ ಇಲಾಖೆಯವರು ಮೂರು ದಿನಗಳ ಕಾಲ ಶವ ಹುಡುಕಾಟದಲ್ಲಿ ತೊಡಗಿದ್ದು ಸೋಮವಾರ ಬೆಳಗ್ಗೆ ಮಗುವಿನ ಶವ ಚನ್ನರಾಯಪಟ್ಟಣ ತಾಲೂಕಿನಆನೆಕೆರೆ ಸಮೀಪ ಇರುವ ಮಳೆನಹಳ್ಳಿ ಹತ್ತಿರ ಕಾಲುವೆಯಲ್ಲಿ ಪತ್ತೆಯಾಗಿದ್ದು ತಾಯಿಯ ಶವ ದೊಡ್ಡಕುಂಚೇವೂ ಕೊಪ್ಪಲು ಗ್ರಾಮದ ಕೆರೆಯಲ್ಲಿ ಪತ್ತೆಯಾಗಿದೆ  ತಾಯಿ ಮತ್ತು ಮಗುವಿನ ಶವಗಳನ್ನು ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕೊಂಡಯ್ಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಚನ್ನರಾಯಪಟ್ಟಣ ತಾಲೂಕಿನ ಗೆಜ್ಜಗಾರನಹಳ್ಳಿ ಗ್ರಾಮದ ಭವ್ಯ ಎಂಬಾಕೆಯನ್ನು ಸುಮಾರು 4 ವರ್ಷಗಳ ಹಿಂದೆ ದೊಡ್ಡ ಕುಂಚೇವು ಕೊಪ್ಪಲು ಗ್ರಾಮದ ಶ್ರೀನಿವಾಸ ಅಪ್ರಾಪ್ತಳನ್ನೇ ವಿವಾಹ ವಾಗಿದ್ದ ಎನ್ನಲಾಗಿದೆ. ಒಂದು ಗಂಡು ಮಗುವಿನ ತಾಯಿಯಾಗಿದ್ದ ಭವ್ಯ ಎಂಬಾಕೆಯ ಜೊತೆ ಕೌಟುಂಬಿಕ ಕಲಹದಿಂದ ನೆಮ್ಮದಿಯ ಜೀವನ ನಡೆಸದೆ ಕೆಲವು ದಿನಗಳ ಹಿಂದೆ ರಾಜಿ ಸಂಧಾನಗಳು ಕೂಡ ನಡೆದಿದ್ದು ಗಂಡ ಶ್ರೀನಿವಾಸನ ಅನೈತಿಕ ಸಂಬಂಧಗಳ ವಿಷಯವಾಗಿ ಆಗಾಗ್ಗೆ ಮನೆ ಜಗಳ ನಡೆದು ಆಕೆಯನ್ನು ಸುಖವಾಗಿ ನೋಡಿಕೊಂಡಿರಲಿಲ್ಲವಂತೆ, ಕೃಷಿಕ ಹಾಗೂ ಟ್ಯಾಕ್ಟರ್ ಚಾಲಕನಾಗಿದ್ದ ಈತ  ಆಕೆಯನ್ನು ಪ್ರತ್ಯೇಕವಾಗಿ ಇರಿಸಿದ್ದರು ಕೂಡ ಉತ್ತಮ ಒಡನಾಟ ಇರದೇ, ಗಂಡ ಮತ್ತು ಅತ್ತೆಯ ಕಾಟ ತಾಳಲಾರದೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ.

 ಪ್ರಕರಣ ನಗರ ಪೊಲೀಸ್  ಠಾಣೆಯಲ್ಲಿ ಮೋಖದ್ದಮೆ ದಾಖಲಾದ್ದು ಪಿಎಸ್ಐ ಅರುಣ್ ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net