

ರಾಮದುರ್ಗ: ತಾಯಂದಿರು ಮಕ್ಕಳಿಗೆ ಸಂಸ್ಕಾರ ಕಲಿಸಬೇಕು ಎಂದು ಧನಲಕ್ಷಿ$್ಮ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯ ಮಲ್ಲಣ್ಣ ಯಾದವಾಡ ಹೇಳಿದರು. ತಾಲೂಕಿನ ಹಿರೇತಡಸಿ ಗ್ರಾಮದ ಕಲ್ಮೇಶ್ವರ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಪ್ರಯುಕ್ತ ಸೋಮವಾರ ಏರ್ಪಡಿಸಿದ್ದ ಧರ್ಮಸಭೆ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಸಂಸತಿ, ಸಂಸ್ಕಾರ ಉಳಿದಿದೆ. ಗ್ರಾಮಸ್ಥರು ಒಗ್ಗಟ್ಟಿನಿಂದ ಶ್ರಮಿಸಿದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ. ಹಿರೇತಡಸಿ ಗ್ರಾಮದ ದೇವಸ್ಥಾನ ನಿರ್ಮಾಣ ಸಾ ಎಂದರು. ಮುಳ್ಳೂರ ಅನ್ನದಾನೇಶ್ವರ ಮಠದ ಚಂದ್ರಶೇಖರ ಶಿವಾಚಾರ್ಯರು, ನೀಲಲೋಚನ ತಾಯಿ ಮಾತನಾಡಿದರು.
ವೇಮೂ ಚೆನ್ನಯ್ಯ ತೋಟಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ಸೈನಿಕ ಪ್ರಕಾಶ ಗಣಪತಿ ಜಾಧವ ಅವರನ್ನು ಸತ್ಕರಿಸಲಾಯಿತು. ಸಂಜೆ ಕಲ್ಮೇಶ್ವರ ಸ್ವಾಮೀಜಿ ರಥೋತ್ಸವ ಸಂಭ್ರಮದಿಂದ ಜರುಗಿತು. ಬಿಜೆಪಿ ಮುಖಂಡ ಬಸವರಾಜ ಸೋಮಗೊಂಡ, ಶೇಖರಗೌಡ ಪಾಟೀಲ, ಗಣಪತಿ ಜಾಧವ, ನಾಗನಗೌಡ ಪಾಟೀಲ, ರಮೇಶ ಜಾಧವ, ಪುಂಡಲೀಕ ಜಾಧವ, ವಿಠ್ಠಲ ಜಾಧವ, ಕೀರಪ್ಪ ಜಾಧವ, ಮಾರುತಿ ಉಪ್ಪಾರ ಗೌಡಪ್ಪಗೌಡ ಪಾಟೀಲ, ಆರ್.ವಿ. ಅಪ್ಪಾಜಿಗೌಡ್ರ ಭವ್ಯ ಇತರರಿದ್ದರು.