

ಗೋಕಾಕ/ಅಂಕಲಗಿ: ಸಾಹಿತಿಗಳು, ರಾಜಕಾರಣಿಗಳು, ಕನ್ನಡಾಭಿಮಾನಿಗಳೆಲ್ಲರೂ ಪ್ರಯತ್ನಶಿಲರಾಗಿ ಕನ್ನಡ ಕಡ್ಡಾಯ ಕಾನೂನು ಜಾರಿಗೆ ತರಲು ಶ್ರಮಿಸೋಣ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ತಾಲೂಕಿನ ಅಂಕಲಗಿ ಗ್ರಾಮದ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಕಸಾಪ ತಾಲೂಕು ಟಕದಿಂದ ಬಸವರಾಜ ಕಟ್ಟೀಮನಿ ವೇದಿಕೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗೋಕಾಕ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಕನ್ನಡ ಅತ್ಯಂತ ಪ್ರಾಚಿನ ಭಾಷೆ. ರಾಷ್ಟ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಬಗ್ಗೆ ವಿಶೇಷ ಪ್ರೀತಿ, ಗೌರವವಿದೆ. ತಾಯಂದಿರು ಮಕ್ಕಳಿಗೆ ಕನ್ನಡ ಕಲಿಸಿ, ಅವರಲ್ಲಿ ಕನ್ನಡಾಭಿಮಾನ ಬೆಳೆಸುವಂತೆ ಕರೆ ನೀಡಿದರು.
ಸಮ್ಮೇಳನದ ಸರ್ವಾಧ್ಯ ಶಿವಲಿಂಗಪ್ಪ ಬಾವಿಕಟ್ಟಿ ಮಾತನಾಡಿ, ಸಮ್ಮೇಳನ ಸಾರ್ಥಕ್ಯವಾಗಲು ಸರ್ಕಾರ ಸದಾ ಕನ್ನಡಿಗರ ಪರವಾಗಿರಬೇಕು. ಕನ್ನಡ ಶಾಲೆಗಳಿಗೆ ಹೆಚ್ಚೆಚ್ಚು ಅನುದಾನ, ಕನ್ನಡ ಮಾಧ್ಯಮ ಮಕ್ಕಳಿಗೆ ಸರ್ಕಾರಿ ಮತ್ತು ಖಾಸಗಿ ಉದ್ಯೋಗದಲ್ಲಿ ವಿಶೇಷ ಮೀಸಲಾತಿ ನೀಡಬೇಕು. ನಮ್ಮ ಕನ್ನಡ ಸಂಸ್ಕತಿ ಉಳಿದರೆ ನಾಡು ಹಾಗೂ ಬದುಕು ಉಳಿಯುತ್ತದೆ. ಎಲ್ಲರೂ ಕನ್ನಡ ಬಳಸಿ ಕನ್ನಡ ಪರಂಪರೆ ಎತ್ತಿ ಹಿಡಿಯಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಅಂಕಲಗಿ&ಕುಂದರಗಿ ಅಡವಿಸಿದ್ದೇಶ್ವರ ಮಠದ ಪೀಠಾಧಿಪತಿ ಅಮಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಅಡವಿಸಿದ್ದೇಶ್ವರ ಶಿವಯೋಗಿಗಳು 363 ಮಠಗಳನ್ನು ಸ್ಥಾಪಿಸಿ, ಶರಣರ ವಚನಗಳನ್ನು ಪ್ರಚಾರ ಮಾಡುವ ಮೂಲಕ ಕನ್ನಡಕ್ಕೆ ಕೊಡುಗೆ ನೀಡಿದ್ದಾರೆ. ಕನ್ನಡ ಭಾಷೆ, ಸಂಸ್ಕತಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಕಸಾಪ ಜಿಲ್ಲಾಧ್ಯೆ ಮಂಗಲಾ ಮೆಟಗುಡ್ಡ ಆಶಯ ನುಡಿಗಳನ್ನಾಡಿದರು. ತಾಲೂಕಾಧ್ಯೆ ಭಾರತಿ ಮದಬಾವಿ ಸ್ವಾಗತಿಸಿದರು.
ಸ್ವಾಗತ ಸಮಿತಿ ಅಧ್ಯ ಭೀಮಗೌಡ ಪೋಲಿಸಗೌಡರ ಪ್ರ್ರಾಸ್ತಾವಿಕ ಮಾತನಾಡಿದರು. ನಿಕಟಪೂರ್ವ ಅಧ್ಯ ಈಶ್ವರಚಂದ್ರ ಬೆಟಗೇರಿ ಅವರು ನಿಯೋಜಿತ ಅಧ್ಯ ಶಿವಲಿಂಗಪ್ಪ ಬಾವಿಕಟ್ಟಿ ಅವರಿಗೆ ಧ್ವಜ ಹಸ್ತಾಂತರಿಸಿದರು.
ತಾಯಿ ಭುವನೇಶ್ವರಿ ಭಾವಚಿತ್ರ ಮತ್ತು ಸಮ್ಮೇಳನಾಧ್ಯ ಶಿವಲಿಂಗ ಬಾವಿಕಟ್ಟಿ ದಂಪತಿ ಮೆರವಣಿಗೆಗೆ ವರ್ತಕ ಅಣ್ಣಾಸಾಹೇಬ ರಾಜಮಾನೆ ಚಾಲನೆ ನೀಡಿದರು. ಅಂಕಲಗಿ ಬಸ್ ನಿಲ್ದಾಣದಿಂದ ಬಸವರಾಜ ಕಟ್ಟೀಮನಿ ಪ್ರಧಾನ ವೇದಿಕೆವರೆಗೆ ಸಕಲವಾದ್ಯಮೇಳದೊಂದಿಗೆ ಸುಮಂಗಲೆಯರು ಕುಂಭಮೇಳ ಹೊತ್ತು ಬರಮಾಡಿಕೊಂಡರು. ದಟ್ಟಿ ಕುಣಿತ, ಹುಲಿವೇಷ, ಕುದುರೆ ವೇಷಧರಿಸಿದ ಕಲಾವಿದರು ಜನಾಕರ್ಷಿಸಿದರು. ಮಾಜಿ ಶಾಸಕ ಎಂ.ಎಲ್. ಮುತ್ತೆನ್ನವರ, ಪ್ರೊ.ಚಂದ್ರಶೇಖರ ಅಕ್ಕಿ, ಮಹಾಂತೇಶ ತಾಂವಶಿ, ಶಾಮಾನಂದ ಪೂಜೇರಿ, ಬಸವರಾಜ ಪಟ್ಟಣಶೆಟ್ಟಿ, ಬಾಳಗೌಡ ಪಾಟೀಲ, ಶಂಕರ ಬೂಸಣ್ಣವರ, ಟಿ.ಆರ್. ಕಾಗಲ್, ಎಂ.ಎಲ್. ತೋಳಿನವರ, ಬಿಇಒ ಜಿ.ಬಿ.ಬಳಗಾರ, ಮುಖ್ಯ ವೆದ್ಯಾಧಿಕಾರಿ ರವೀಂದ್ರ ಅಂಟಿನ್, ಸಮಾಜ ಕಲ್ಯಾಣಾಧಿಕಾರಿ ಎ.ಬಿ. ಮಲಬನ್ನವರ, ಸ್ಥಳಿಯ ಪಪಂ ಮುಖ್ಯಾಧಿಕಾರಿ ಕೆಂಪಣ್ಣ ಪಾಟೀಲ, ವಿರೂಪಾ ಅಂಗಡಿ, ಮುನ್ನಾ ದೇಸಾಯಿ, ಬಿ.ಎಲ್. ಪರಗಣ್ಣವರ, ನಿವತ್ತ ಸೇನಾಧಿಕಾರಿಗಳಾದ ಎಲ್.ಎಲ್. ಮಲ್ಲಾಪುರ, ಎ.ಬಿ. ಅಂಬಲಿ, ಬಸವರಾಜ ಮಾಳಗಿ ಇತರರು ಇದ್ದರು.