ತಾಪಂ ಉಪಾಧ್ಯಕ್ಷೆಯಾಗಿ ವಿಜಯಲಕ್ಷ್ಮೀ ಆಯ್ಕೆ

19SGN01
Published on

ಶಿಗ್ಗಾಂವಿ: ಶಿಗ್ಗಾಂವಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷೆಯಾಗಿ ವಿಜಯಲಕ್ಷ್ಮೀ ಮುಂದಿನಮನಿ ಅವಿರೋಧವಾಗಿ ಆಯ್ಕೆಯಾದರು.

ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಈ ಮೊದಲು ಉಪಾಧ್ಯಕ್ಷೆಯಾಗಿದ್ದ ಪದ್ಮಾವತಿ ಪಾಟೀಲ ರಾಜೀನಾಮೆ ನೀಡಿದ ಕಾರಣ ತೆರವಾಗಿದ್ದ ಸ್ಥಾನಕ್ಕೆ ಶನಿವಾರ ಚುನಾವಣೆ ನಿಗದಿಯಾಗಿತ್ತು. ವಿಜಯಲಕ್ಷ್ಮೀ ಮುಂದಿನಮನಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾ ಅಧಿಕಾರಿ ಅನ್ನಪೂರ್ಣ ಮುದಕಮ್ಮನವರ ಅವರು ಅವಿರೋಧ ಆಯ್ಕೆ ಘೊಷಿಸಿದರು.

ತಾ.ಪಂ. ಇಒ ಪ್ರಶಾಂತ ತುರಕಾಣಿ, ಎಪಿಎಂಸಿ ಅಧ್ಯಕ್ಷ ಹರ್ಜಪ್ಪ ಲಮಾಣಿ, ಬಿಜೆಪಿ ಯುವ ಮೊರ್ಚಾ ಅಧ್ಯಕ್ಷ ಶಿವರಾಜ ರಾಯಣ್ಣವರ, ಜಿಪಂ ಮಾಜಿ ಸದಸ್ಯ ಡಾ.ಮಲ್ಲೇಶಪ್ಪ ಹರಿಜನ, ತಾ.ಪಂ. ಸದಸ್ಯರಾದ ಬಿ.ಎಸ್. ಹಿರೇಮಠ, ವಿಶ್ವನಾಥ ಹರವಿ, ಯಲ್ಲಪ್ಪ ನರಗುಂದ, ಪದ್ಮಾವತಿ ಪಾಟೀಲ, ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಶ್ರೀಕಾಂತ ಬುಳ್ಳಕ್ಕನವರ ಉಮೇಶ ಅಂಗಡಿ, ದೇವಣ್ಣ ಚಾಕಲಬ್ಬಿ, ಎಸ್.ಕೆ. ಅಕ್ಕಿ, ಶಂಭಣ್ಣ ಕಡಕೋಳ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net