ತಾಪಂ ಉಪಾಧ್ಯಕ್ಷರಾಗಿ ದೊಡಮನಿ ಆಯ್ಕೆ

23-11JVG02
Published on

ಜೇವರ್ಗಿ: ತಾಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಗಂವ್ಹಾರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುಲಿಂಗಪ್ಪ ದೊಡ್ಡಮನಿ ಅವಿರೋಧ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಹಾಗೂ ಸಹಾಯಕ ಆಯುಕ್ತ ರಾಮಚಂದ್ರ ಗಡದೆ ತಿಳಿಸಿದರು.
16 ಸದಸ್ಯರ ಬಲ ಹೊಂದಿರುವ ತಾಲೂಕು ಪಂಚಾಯಿತಿಯಲ್ಲಿ ಬಿಜೆಪಿ-9, ಕಾಂಗ್ರೆಸ್-5, ಜೆಡಿಎಸ್-2 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಈ ಹಿಂದೆ ಆಲೂರ ಕ್ಷೇತ್ರದ ಗೊಲ್ಲಾಳಪ್ಪ ಪೂಜಾರಿ ಅವರು ಉಪಾಧ್ಯಕ್ಷರಾಗಿದ್ದರು. ಯಡ್ರಾಮಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಿ, ಆಲೂರನ್ನು ಸೇರಿಸಲಾಗಿದೆ. ಹೀಗಾಗಿ ಗೊಲ್ಲಾಳಪ್ಪ ಅವರು ಯಡ್ರಾಮಿ ತಾಲೂಕು ಪಂಚಾಯಿತಿಗೆ ಸದಸ್ಯರಾಗಿದ್ದಾರೆ. ಇದರಿಂದ ಖಾಲಿ ಉಳಿದ ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಸಿದ್ದು, ಗುರಲಿಂಗಪ್ಪ ದೊಡ್ಡಮನಿ ಹೊರತು ಪಡಿಸಿ ಬೇರಾರು ನಾಮಪತ್ರ ಸಲ್ಲಿಸದಿರುವುದರಿಂದ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು.
ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ನೇತೃತ್ವದಲ್ಲಿ ಕಾರ್ಯಕರ್ತರು ವಿಜಯೋತ್ಸವ ನಡೆಸಿದರು. ರಮೇಶಬಾಬು ವಕೀಲ, ಮಲ್ಲಿನಾಥಗೌಡ ಪಾಟೀಲ್ ಯಲಗೌಡ, ಧರ್ಮಣ್ಣ ದೊಡಮನಿ, ಶೋಭಾಬಾಣಿ, ಭೀಮರಾವ ಗುಜಗುಂಡ, ರೇವಣಿಸಿದ್ದಪ್ಪ ಸಂಕಾಲಿ, ಬಸವರಾಜ ಜಮಶೆಟ್ಟಿ, ಸಾಯಬಣ್ಣ ದೊಡಮನಿ, ಪುಂಡಲಿಕ ಗಾಯಕವಾಡ, ಬಸವರಾಜ ಪಾಟೀಲ್ ನರಿಬೋಳ, ಪ್ರಭಾಕರ ರಬಶೇಟ್ಟಿ, ಶಿವಾನಂದಸಾಹು ಮಾಕಾ, ರಾಜು ರದ್ದೇವಾಡಗಿ, ಗುರುಶಾಂತ ಸೀಕೆದ, ಬಸವರಾಜ ಸಾಸಾಬಾಳ, ರಾಜು ತಳವಾರ, ಸಾಯಗೌಡ ಬುಟ್ನಾಳ, ವಿಶ್ವರಾಧ್ಯ ಗಂವ್ಹಾರ, ದೇವಣ್ಣಗೌಡ ರುಗಿ, ವಿಜ್ಜುಗೌಡ ಹರನೂರ, ಚನ್ನುಗೌಡ ಅಂಗಡಿ, ಗುರನಾಥ ನಾಯ್ಕೋಡಿ, ನಿಂಗಣ್ಣ ಕೊಡಚಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net