ತಾಪಂ ಇಒ ಸಿದ್ನಾಳ ವರ್ಗಾವಣೆ ಮಾಡಿ

26Huk1
ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ತಾಪಂ ಇಒ ಉಮೇಶ ಸಿದ್ನಾಳ ಅವರನ್ನು ವರ್ಗಾವಣೆಗೊಳಿಸುವಂತೆ ಒತ್ತಾಯಿಸಿ ಹುಕ್ಕೇರಿಯಲ್ಲಿ ವಿವಿಧ ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟಿಸಿದರು. ದಿಲೀಪ ಹೊಸಮನಿ, ಮಲ್ಲಿಕಾರ್ಜುನ ರಾಶಿಂಗೆ, ಆನಂದ ಕೆಳಗಡೆ, ಶ್ರೀನಿವಾಸ ವ್ಯಾಪಾರಿ, ಲಕ್ಷ್ಮಣ ಹೂಲಿ, ಕೆಂಪಣ್ಣ ಶಿರಹಟ್ಟಿ, ಪಿಂಟು ಸೂರ್ಯವಂಶಿ, ಮಂಜು ಪಡದಾರ, ವೆಂಕಟೇಶ ಹೊಸೂರ ಇದ್ದರು.
Published on

ಹುಕ್ಕೇರಿ: ತಾಲೂಕು ಪಂಚಾಯಿತಿ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿಯೂ ಆದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಅವರನ್ನು ಕೂಡಲೇ ವರ್ಗಾವಣೆ ಮಾಡುವಂತೆ ಒತ್ತಾಯಿಸಿ, ಅಂಬೇಡ್ಕರ್ ಜನಜಾಗೃತಿ ವೇದಿಕೆ ಹಾಗೂ ವಿವಿಧ ದಲಿತಪರ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ಪ್ರತಿಭಟಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಮಾಯಿಸಿದ ಅಂಬೇಡ್ಕರ್ ಜನಜಾಗೃತಿ ವೇದಿಕೆ, ದಲಿತ ಸಂಘರ್ಷ ಸಮಿತಿ, ಭೀಮ್ ಆರ್ಮಿ ಹಾಗೂ ವಿವಿಧ ದಲಿತಪರ ಸಂಘಟನೆಗಳ ಕಾರ್ಯಕರ್ತರು ದಲಿತಪರ ಸಂಘಟನೆಗಳ ಕಾರ್ಯಕರ್ತರು, ಕೋರ್ಟ್ ವೃತ್ತದಿಂದ ರ‌್ಯಾಲಿ ನಡೆಸಿ ತಾಪಂ ಆವರಣದಲ್ಲಿ ಪ್ರತಿಭಟಿಸಿದರು.

ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಅಧಿಕಾರಿ ಸಿದ್ನಾಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಉಮೇಶ ಸಿದ್ನಾಳ ದಲಿತರ ಸಮಸ್ಯೆ ಪರಿಹರಿಸುವಲ್ಲಿ ಸಂಪೂರ್ಣ ವಿಲವಾಗಿದ್ದಾರೆ. ಅವರಗೋಳ, ಗವನಾಳ ಸೇರಿ ಮತ್ತಿತರ ಹಳ್ಳಿಗಳಿಗೆ ಸ್ಮಶಾನಭೂಮಿ ಮಂಜೂರಾತಿ ಮಾಡುವಲ್ಲಿ ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ. ಅವರು ತಾಪಂ ಇಒ ಹುದ್ದೆಗೆ ಪ್ರಭಾರಿಯಾಗಿ ನೇಮಕವಾದ ದಿನದಿಂದ ಸಮಾಜ ಕಲ್ಯಾಣ ಇಲಾಖೆಯ ಅನೇಕ ಯೋಜನೆಗಳು ಕುಂಠಿತಗೊಂಡಿವೆ. ಸರಿಯಾಗಿ ಎಸ್‌ಸಿ, ಎಸ್‌ಟಿ ಸಭೆ ನಡೆಸಿಲ್ಲ ಎಂದು ದೂರಿದರು. ದಿಲೀಪ ಹೊಸಮನಿ, ಮಲ್ಲಿಕಾರ್ಜುನ ರಾಶಿಂಗೆ, ಆನಂದ ಕೆಳಗಡೆ, ಶ್ರೀನಿವಾಸ ವ್ಯಾಪಾರಿ, ಲಕ್ಷ್ಮಣ ಹೂಲಿ, ಕೆಂಪಣ್ಣ ಶಿರಹಟ್ಟಿ, ಪಿಂಟು ಸೂರ್ಯವಂಶಿ, ಮಂಜು ಪಡದಾರ, ವೆಂಕಟೇಶ ಹೊಸೂರ, ಮಂಜು ಮರಡಿ, ಆಕಾಶ ಕೇರಿಮನಿ, ರೇಖಾ ಬಂಗಾರಿ, ಆರತಿ ಕಾಂಬಳೆ, ರಾಜು ಮುಥಾ, ಗಂಗಾರಾಮ ಹುಕ್ಕೇರಿ, ಬಸವರಾಜ ದೇವುಗೋಳ, ಸುನೀಲ ಖಾತೇದಾರ, ಮಲ್ಲು ಕುರಣಿ, ಸುಖದೇವ ತಳವಾರ, ಕಿರಣ ಕೋಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net