ತಾತ್ವಿಕತೆಯೇ ಬೇಂದ್ರೆ ಕಾವ್ಯದ ಶಕ್ತಿ

bkt-20-3
ಬಾಗಲಕೋಟೆ ನಗರದ ಸಕ್ರಿ ಪದವಿ-ಪೂರ್ವ ಕಾಲೇಜಿನ ಕನ್ನಡ ಸಂಘ ಬುಧವಾರ ಹಮ್ಮಿಕೊಂಡಿದ್ದ ಸುವರ್ಣ ಕರ್ನಾಟಕ ಸಂಭ್ರಮಾಚರಣೆ, ನಾಕುತಂತಿ - ಚಿನ್ನದ ಹಬ್ಬ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಕವಿ ಆನಂದ ಝುಂಜರವಾಡ ಮಾತನಾಡಿದರು.
Published on

ಬಾಗಲಕೋಟೆ: ಕವಿತೆ ಅರ್ಥವಾಗುವುದು ಓದುಗನ ಕಲ್ಪನಾ ಶಕ್ತಿ ಹಾಗೂ ವಿವೇಚನಾ ಶಕ್ತಿಗೆ ಸಂಬAಽಸಿದ್ದು. ಮಾಧ್ಯಮ ಅನ್ನುವುದು ನಮ್ಮ ಅನುಭವಕ್ಕೆ ಸಂಬಂಧಿಸಿದ್ದು ಎಂದು ಕವಿ ಆನಂದ ಝುಂಜರವಾಡ ಹೇಳಿದರು.

ನಗರದ ಸಕ್ರಿ ಪದವಿ-ಪೂರ್ವ ಕಾಲೇಜಿನ ಕನ್ನಡ ಸಂಘ ಬುಧವಾರ ಹಮ್ಮಿಕೊಂಡಿದ್ದ ಸುವರ್ಣ ಕರ್ನಾಟಕ ಸಂಭ್ರಮಾಚರಣೆ, ನಾಕುತಂತಿ - ಚಿನ್ನದ ಹಬ್ಬ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಕವಿತೆಗಳೊಳಗೆ ಕವಿ ಬಳಸುವ ವಹನ, ಸಂವಹನ ಹಾಗೂ ವೀಕಿರಣ ರೀತಿಯ ಕ್ರಮಗಳೆ ಶ್ರೇಷ್ಠವಾದದು ಬೇಂದ್ರೆ ಈ ಕ್ರಮಗಳನ್ನ ಬಳಸಿಕೊಂಡಿದ್ದರು. ನಾನು ಎನ್ನುವುದರ ಬಗ್ಗೆ ಬೇಂದ್ರೆಯವರು ನಾನು ಇದ್ದನೇ ಎಂದು ಹೇಳುವ ಪರಿಕಲ್ಪನೆ. ಇದು ನನ್ನ ಅರಿವಿನೊಳಗೆ ನಾನು ಇದ್ದನೇ ಎಂದು ತಿಳಿಸುತ್ತದೆ. ನಾನು ಎಂಬುದು ಜಾಗೃತವಾದಗ ನೀನು ಅರ್ಥವಾಗುತ್ತದೆ ಎಂದು ಹೇಳುತ್ತಾ ಬೇಂದ್ರೆಯವರ ನಾಕುತಂತಿಯ ಪರಿಕಲ್ಪನೆಯನ್ನು ತಿಳಿಸಿದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಬಾಳಾಸಾಹೇಬ ಲೋಕಾಪುರ ಮಾತನಾಡಿ, ಕವಿಗೆ ಗರ್ವ ವಿರಬಾರದು ಕವಿ ತನ್ನೊಳಗೆ ತಾನು ಮಾಗುತ್ತಾ ಪ್ರೀತಿ ಹಂಚಬೇಕು. ಪ್ರೀತಿ ಗರ್ವವಲ್ಲ ದ್ವೇಷವೂ ಅಲ್ಲ. ಕವಿಯ ಚಿತ್ತ ಹುತ್ತಗಟ್ಟಿರಬೇಕು. ಸನ್ಮಾನ ಜವಬ್ದಾರಿಯನ್ನು ಹೆಚ್ಚಿಸಿದೆ. ಸಂಸ್ಥೆಯ ಋಣ ಭಾರ ನನ್ನ ಮೇಲಿದೆ ಎಂದರು.

ವಿದ್ಯಾ ಪ್ರಸಾರಕ ಮಂಡಳದ ಗೌರವ ಕಾರ್ಯದರ್ಶಿ ಡಾ.ಗಿರೀಶ ಮಾಸೂರಕರ ಮಾತನಾಡಿ, ಇಂತಹ ಕಾರ್ಯಕ್ರಮಗಳು ಸಾರ್ಥಕವಾಗಬೇಕಾದರೆ ವಿದ್ಯಾರ್ಥಿಗಳು ಆಸಕ್ತಿಯಿಂದ ಸಾಹಿತ್ಯ ಅಧ್ಯಯನದಲ್ಲಿ ತೊಡಗಬೇಕು ಬೇಂದ್ರೆ ವಿಶ್ವ ಸಾಹಿತ್ಯಕ್ಕೆ ಮಾದರಿಯಾದ ಕವಿ. ಅಂತವರ ನಾಕುತಂತಿ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತು ಐವತ್ತು ವರ್ಷ ಸಂದ ನಿಮಿತ್ತ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ನನಗೆ ಹೆಮ್ಮೆ ತಂದಿದೆ ಎಂದು ತಿಳಿಸಿದರು.

ಪ್ರಾಚಾರ್ಯ ಅಶೋಕ ಕಂದಗಲ್ಲ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು, ಡಾ. ಉಮೇಶ ತಿಮ್ಮಾಪುರ ಪರಿಚಯಿಸಿದರು, ಜಿ.ಬಿ .ಕುಲಕರ್ಣಿ ವಂದಿಸಿದರು, ಆರ್.ಜೆ.ಬೋಮ್ಮಣಗಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net