ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ, ಆಕ್ಷೇಪಣೆಗೆ ಅವಕಾಶ

Published on

ಹಾವೇರಿ: ಬ್ಯಾಡಗಿ ಶಿಶು ಅಭಿವೃದ್ಧಿ ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ.
ನಿಸರ್ಗ ನಗರ, ವಿದ್ಯಾನಗರ-3, ಗುಡ್ಡದಮಲ್ಲಾಪುರ, ಅರಬಗೊಂಡ-2, ಇಂಗಳಗೊಂದಿ-3 ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರ ಹಾಗೂ ವಿದ್ಯಾನಗರ-2, ಹೂಗಾರ ಗಲ್ಲಿ, ಮುತ್ತಲಪುರ ಪ್ಲಾಟ್, ಮೊಟೆಬೆನ್ನೂರ-2, ಕದರಮಂಡಲಗಿ-4, ಆಣೂರ-1, ಇಂಗಳಗೊಂದಿ-3, ಹೆಡಿಗ್ಗೊಂಡ-1 ಅಂಗವಾಡಿ ಕೇಂದ್ರಗಳ ಸಹಾಯಕಿಯರ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ. ಈ ಆಯ್ಕೆಗೆ ಆಕ್ಷೇಪಣೆಗಳಿದ್ದಲ್ಲಿ ಅಭ್ಯರ್ಥಿಗಳು ಜೂ.23ರ ಒಳಗಾಗಿ ಲಿಖಿತ ರೂಪದಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net