ತಾತಂಡ ತಂಡಕ್ಕೆ ಭರ್ಜರಿ ಜಯ

24.,NPK-2
Published on

ನಾಪೋಕ್ಲು: ಸಮೀಪದ ಚೆರಿಯಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿರುವ 23ನೇ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಶುಕ್ರವಾರದ ಪಂದ್ಯಗಳು ವೀಕ್ಷಕರನ್ನು ರಂಜಿಸಿದವು.

ಮೈದಾನ ಒಂದರಲ್ಲಿ ತಾತಂಡ ಮತ್ತು ಮುಕ್ಕಾಟಿರ (ಕುಂಬಳದಾಳು)ತಂಡಗಳ ನಡುವಿನ ಪಂದ್ಯದಲ್ಲಿ ತಾತಂಡ ತಂಡ 6- 1 ಅಂತರದ ಭರ್ಜರಿ ಜಯ ಸಾಧಿಸಿತು. ಕೇಟೋಳಿರ ಮತ್ತು ಕೊಂಗಂಡ ತಂಡಗಳ ನಡುವಿನ ಪಂದ್ಯದಲ್ಲಿ ಕೇಟೋಳಿರ ತಂಡದ ವಿರುದ್ಧ ಕೊಂಗಂಡ ತಂಡ ಜಯ ಸಾಧಿಸಿತು. ಚೌರಿರ(ಹೊದವಾಡ) ಮತ್ತು ಮಂಡೆಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಚೌರಿರ(ಹೊದವಾಡ) ತಂಡ ಮುಂದಿನ ಸುತ್ತು ಪ್ರವೇಶಿಸಿತು. ಕಡೇಮಾಡ ಮತ್ತು ಮೂಕಂಡ ತಂಡಗಳ ನಡುವಿನ ಪಂದ್ಯದಲ್ಲಿ ಕಡೇಮಾಡ 4-1 ಅಂತರದ ಜಯ ಸಾಧಿಸಿತು.

ಬಾಚಂಗಡ ಮತ್ತು ಕೊಕ್ಕಂಡ ತಂಡಗಳ ನಡುವಿನ ಪಂದ್ಯದಲ್ಲಿ ಕೊಕ್ಕಂಡ ತಂಡ ಮುಂದಿನ ಸುತ್ತು ಪ್ರವೇಶಿಸಿತು. ಎಳ್ತಂಡ ಮತ್ತು ನಾಪನೆರವಂಡ ತಂಡಗಳ ನಡುವಿನ ಪಂದ್ಯದಲ್ಲಿ ಎಳ್ತಂಡ 4 ಗೋಲು ಗಳಿಸಿತು. ನಾಪನೆರವಂಡ ತಂಡ ಯಾವುದೇ ಗೋಲು ಗಳಿಸಲಿಲ್ಲ. ಸುಳ್ಳಿಮಾಡ ಮತ್ತು ಪೊನ್ನಚೆಟ್ಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪೊನ್ನಚೆಟ್ಟಿರ ತಂಡ ಮುಂದಿನ ಸುತ್ತು ಪ್ರವೇಶಿಸಿತು.

ಮೈದಾನ ಎರಡರಲ್ಲಿ ನಡೆದ ಪಂದ್ಯಗಳಲ್ಲಿ ಪಾಲೆಯಂಡ ತಂಡ ತೆನ್ನಿರ ತಂಡದ ವಿರುದ್ಧ 5-0 ಗೋಲುಗಳ ಭರ್ಜರಿ ಜಯ ಸಾಧಿಸಿತು. ಅಪ್ಪಡೇರಂಡ ಮತ್ತು ಚೊಟ್ಟೇರ ತಂಡಗಳ ನಡುವಿನ ಪಂದ್ಯದಲ್ಲಿ ಚೊಟ್ಟೇರತಂಡ ಯಾವುದೇ ಗೋಲು ಗಳಿಸದೆ ಸೋಲನ್ನು ಅನುಭವಿಸಿತು. ಪೆಮ್ಮಂಡ ತಂಡವು ಬೊಳ್ಳೆರ ತಂಡದ ವಿರುದ್ಧ 4-0 ಅಂತರದ ಜಯ ಸಾಧಿಸಿತು. ಕೇಚಮಾಡ ಮತ್ತು ಇಟ್ಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಇಟ್ಟೀರತಂಡ ಮುಂದಿನ ಸುತ್ತು ಪ್ರವೇಶಿಸಿತು. ನಾಟೋಲಂಡ ಮತ್ತು ಮಲ್ಲಮಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನಾಟೋಳಡ ತಂಡ 3-4 ಅಂತರದಿಂದ ಸೋಲನ್ನು ಅನುಭವಿಸಿತು. ಕಾಣತಂಡ ಮತ್ತು ಮಂಡೇಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಂಡೇಡ ತಂಡ ಮುಂದಿನ ಸುತ್ತು ಪ್ರವೇಶಿಸಿತು. ಮಂಡೀರ (ನೆಲಜಿ) ತಂಡವು 3-4 ಅಂತರದಿಂದ ಅಲ್ಲಂಡ ತಂಡದ ವಿರುದ್ಧ ಸೋಲನ್ನು ಅನುಭವಿಸಿತು.

ಮೈದಾನ ಮೂರರಲ್ಲಿ ಮಾಳೇಟಿರ(ಕೆದ ಮುಳ್ಳೂರು) ಹಾಗೂ ಮುಕ್ಕಾಟಿರ (ಪುಲಿಕೋಟು) ತಂಡಗಳ ನಡುವೆ ರೋಚಕ ಪಂದ್ಯ ನಡೆಯಿತು. ಮುಕ್ಕಾಟಿರ ತಂಡವು 2-1 ಅಂತರದಿಂದ ಮಾಳೇಟಿರ ತಂಡದ ವಿರುದ್ಧ ಜಯ ಸಾಧಿಸಿತು. ಪಾಲಚಂಡ ಮತ್ತು ಕೋಡಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೋಡೀರ ತಂಡ 1-0 ಮುನ್ನಡೆ ಸಾಧಿಸಿತು. ಮೂಕಳೇರ ಮತ್ತು ಕಾಯಪಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ 2-1 ಅಂತರದಿಂದ ಮೂಕಳೇರ ಜಯ ಸಾಧಿಸಿತು. ಅಜ್ಜಿಕುಟ್ಟೀರ ಮತ್ತು ಬಲ್ಲಚಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬಲ್ಲಚಂಡ ಮುಂದಿನ ಸುತ್ತು ಪ್ರವೇಶಿಸಿತು.

ಕಂಬೇಯಂಡ ಮತ್ತು ಪುಲ್ಲೇರ ತಂಡಗಳ ನಡುವಿನ ಪಂದ್ಯದಲ್ಲಿ ಕಂಬೆಯಂಡ 3-0 ಅಂತರದ ಜಯ ಸಾಧಿಸಿತು. ಉಧಿಯಂಡ ಮತ್ತು ಕರ್ತಮಾಡ(ಶೆಟ್ಟಿಗೇರಿ)ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಉದಿಯಂಡ ಮುಂದಿನ ಸುತ್ತು ಪ್ರವೇಶಿಸಿತು. ಮುಕ್ಕಾಟಿರ (ಹರಿಹರ )ಮತ್ತು ಮಾಕರ್ಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮುಕ್ಕಾಟಿರ ತಂಡ ಮುಂದಿನ ಸುತ್ತಿಗೆ ಅರ್ಹತೆ ಗಳಿಸಿತು.

ನಾಪನೆರವಂಡ ತಂಡದ ಪರವಾಗಿ 84 ವರ್ಷದ ಹಿರಿಯ ನಾಪನೆರವಂಡ ಪೊನ್ನಪ್ಪ (84) ಆಟವಾಡಿ ವೀಕ್ಷಕರ ಗಮನ ಸೆಳೆದರು. ಅದೇ ತಂಡದಲ್ಲಿ ಗಂಡ, ಹೆಂಡತಿ, ಮಗ, ಮಗಳು ತಂಡದ ಪರವಾಗಿ ಆಟವಾಡಿದ್ದು ವಿಶೇಷವೆನಿಸಿತು. ಮಗಳು ಸ್ವಯಂ ಎಂಬಾಕೆ ಹುಟ್ಟಿದ ದಿನದಂದು ತಂಡದ ಪರವಾಗಿ ಗೋಲ್ ಕೀಪರ್ ಆಗಿ ಕಾರ್ಯನಿರ್ವಹಿಸಿ ವೀಕ್ಷಕರ ಮೆಚ್ಚುಗೆಗೆ ಪಾತ್ರರಾದಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net